ನವದೆಹಲಿ: ಭಾರತದಲ್ಲಿ ಚೀನಾ ಆಪ್ ಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಈಗ ಚೀನಾ ಕೂಡಾ ತನ್ನ ದೇಶದಲ್ಲಿ ಭಾರತದ ಸುದ್ದಿ ವಾಹಿನಿಗೆ ನಿರ್ಬಂಧ ವಿಧಿಸಿದೆ.
‘ವಿಯಾನ್’ ಎಂಬ ಸುದ್ದಿ ವಾಹಿನಿಯ ಪ್ರಸಾರಕ್ಕೆ ಚೀನಾದಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ವಾಹಿನಿ ಚೀನಾದಲ್ಲಿ ಕೊರೋನಾ ನಿರ್ವಹಣೆ ಕುರಿತಂತೆ ಟೀಕೆ ಮಾಡಿ ಸುದ್ದಿ ಪ್ರಸಾರ ಮಾಡಿತ್ತು. ಆಗಲೇ ಚೀನಾ ಸರ್ಕಾರಕ್ಕೆ ಈ ಸುದ್ದಿ ವಾಹಿನಿಯ ಮೇಲೆ ಆಕ್ರೋಶವಿತ್ತು. ಇದೀಗ ಭಾರತ ತನ್ನ ದೇಶದ ಆಪ್ ಗಳಿಗೆ ನಿರ್ಬಂಧ ವಿಧಿಸಿದ್ದಕ್ಕೆ ಪ್ರತಿಯಾಗಿ ತಾನೂ ಭಾರತದ ಸುದ್ದಿ ವಾಹಿನಿಗೆ ನಿರ್ಬಂಧ ವಿಧಿಸಿದೆ.