ರಾಮನ ಬಳಿಕ ಯೋಗವೂ ಭಾರತದ್ದಲ್ಲ ಎಂದು ವಿವಾದ ಸೃಷ್ಟಿಸಿದ ನೇಪಾಳ ಪ್ರಧಾನಿ

ಮಂಗಳವಾರ, 22 ಜೂನ್ 2021 (10:01 IST)
ಕಠ್ಮಂಡು: ಹಿಂದೊಮ್ಮೆ ಪ್ರಭು ಶ್ರೀರಾಮ ಚಂದ್ರ ಹುಟ್ಟಿದ್ದು ಭಾರತದ ಅಯೋಧ್ಯೆಯಲ್ಲ. ನೇಪಾಳದಲ್ಲಿ ಎಂದು ವಿವಾದ ಸೃಷ್ಟಿಸಿದ್ದ ನೇಪಾಳ ಪ್ರಧಾನಿ ಕೆಪಿ ಒಲಿ ಈಗ ಯೋಗದ ಬಗ್ಗೆಯೂ ತಗಾದೆ ತೆಗೆದಿದ್ದಾರೆ.


ನಿನ್ನೆ ಯೋಗ ದಿನಾಚರಣೆಯಂದು ಮಾತನಾಡಿರುವ ಅವರು ಯೋಗದ ಮೂಲ ಭಾರತವಲ್ಲ. ಭಾರತ ಒಂದು ದೇಶವಾಗಿ ರೂಪುಗೊಳ್ಳುವ ಮೊದಲೇ ನೇಪಾಳದಲ್ಲಿ ಯೋಗ ಚಾಲ್ತಿಯಲ್ಲಿತ್ತು ಎಂದು ವಿವಾದ ಸೃಷ್ಟಿಸಿದ್ದಾರೆ.

2015 ರಿಂದ ಭಾರತೀಯ ಪ್ರಧಾನಿ ಮೋದಿ ಮನವಿ ಮೇರೆಗೆ ವಿಶ್ವಸಂಸ್ಥೆ ಜೂನ್ 21 ರಂದು ವಿಶ್ವ ಯೋಗ ದಿನವನ್ನಾಗಿ ಘೋಷಿಸಿತ್ತು. ಯೋಗ ವಿಶ್ವಕ್ಕೆ ಭಾರತೀಯರ ಕೊಡುಗೆ ಎಂದೇ ಹೇಳಲಾಗಿದೆ. ಆದರೆ ನೇಪಾಳ ಪ್ರಧಾನಿ ಈ ವಾದವನ್ನು ಅಲ್ಲಗಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ