ಗಲ್ವಾನ್ ಘರ್ಷಣೆಗೆ ಒಂದು ವರ್ಷ

ಮಂಗಳವಾರ, 15 ಜೂನ್ 2021 (10:37 IST)
ನವದೆಹಲಿ: ಭಾರತ ಮತ್ತು ಚೀನಾ ಯೋಧರ ನಡುವೆ ಗಲ್ವಾನ್ ಗಡಿಯಲ್ಲಿ ನಡೆದ ಗುದ್ದಾಟಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಈಗಲೂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.


ಕೊರೋನಾದಿಂದ ನಲುಗುತ್ತಿದ್ದ ಭಾರತಕ್ಕೆ ರೋಗ ಹರಡಿದ್ದಲ್ಲದೆ, ಚೀನಾ ಗಡಿಯಲ್ಲೂ ತಗಾದೆ ತೆಗೆಯುವ ಮೂಲಕ 20 ಯೋಧರ ಸಾವಿಗೆ ಕಾರಣವಾಗಿತ್ತು. ಇದರ ಬಳಿಕ ಭಾರತದಲ್ಲಿ ಚೀನಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಈ ಘರ್ಷಣೆಯಲ್ಲಿ ಚೀನಾದ ಹಲವು ಯೋಧರು ಮಡಿದಿದ್ದರು ಎನ್ನಲಾಗಿದ್ದರೂ, ಅದರ ಬಗ್ಗೆ ಅಧಿಕೃತ ಮಾಹಿತಿಯನ್ನು ಜಗತ್ತಿನ ಕಣ್ಣಿನಿಂದ ಮರೆಮಾಚಿತ್ತು.  ಇದಾದ ಬಳಿಕ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಎರಡೂ ಪಡೆಗಳು ಸೈನಿಕರನ್ನು ನಿಯೋಜಿಸಿತ್ತು. ಇದಾದ ಬಳಿಕ ಸೇನಾ ಮಟ್ಟದಲ್ಲಿ ಮಾತುಕತೆ ನಡೆದು ಸೇನೆ ಹಿಂಪಡೆಯುವ ಮಾತಾಗಿತ್ತು. ಹಾಗಿದ್ದರೂ ಈಗಲೂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ