ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ

ಗುರುವಾರ, 4 ಆಗಸ್ಟ್ 2022 (12:42 IST)
ತೈಪೆ : ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದ ಹಿನ್ನೆಲೆ ಕೆರಳಿರುವ ಚೀನಾ ತನ್ನ ಸೇನೆಗೆ ಯುದ್ಧಕ್ಕೆ ಸಜ್ಜಾಗಲು ತರಬೇತಿ ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತೈವಾನ್ ಸುತ್ತ ಸಮುದ್ರದಲ್ಲಿ ಸುತ್ತುವರಿದಿದ್ದು, ಮಿಲಿಟರಿ ತರಬೇತಿ ನಡೆಸುತ್ತಿದೆ. ತೈವಾನ್ನ ಮಿಲಿಟರಿ ದ್ವೀಪದ ಸುತ್ತಮುತ್ತಲಿನ ಸಮುದ್ರದಲ್ಲಿ ನಡೆಯುತ್ತಿರುವ ಚೀನೀ ತರಬೇತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿಯಾಗಿದೆ.

ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಬೆನ್ನಲ್ಲೇ ತೈವಾನ್ ವಿರುದ್ಧ ಚೀನಾ ಪ್ರತೀಕಾರಕ್ಕೆ ಮುಂದಾಗಿದೆ. ಚೀನಾದ 27 ಯುದ್ಧ ವಿಮಾನಗಳು ತೈವಾನ್ನ ವಾಯುರಕ್ಷಣಾ ಪ್ರದೇಶವನ್ನು ಪ್ರವೇಶಿಸಿವೆ. ಪೀಪಲ್ಸ್ ಲಿಬರೇಷನ್ ಆರ್ಮಿಯ 27 ಯುದ್ಧ ವಿಮಾನಗಳು ನಮ್ಮ ಪ್ರದೇಶವನ್ನು ಸುತ್ತುವರಿದಿವೆ ಎಂದು ತೈವಾನ್ ರಕ್ಷಣಾ ಇಲಾಖೆ ದೃಢಪಡಿಸಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ