ಮಾಸ್ಕೋ : ರಷ್ಯಾ ವಿರುದ್ಧ ನಮ್ಮದು ಏಕಾಂಗಿ ಹೋರಾಟ. ಅಮೆರಿಕಾ, ನ್ಯಾಟೋ ದೇಶಗಳು ಕೈಕೊಟ್ಟಿವೆ ಹಾಗಂತಾ ನಾವು ಎದೆಗುಂದುವುದು ಬೇಡ.
ನಮ್ಮ ದೇಶ ಉಳಿಸಿಕೊಳ್ಳಿಕೊಳ್ಳಲು ವಿರೋಚಿತ ಹೋರಾಟ ನಡೆಸೋಣ ಉಕ್ರೇನ್ನ ಧೀರ ಪ್ರಜೆಗಳೇ ರಷ್ಯಾ ವಿರುದ್ಧ ಹೋರಾಟ ಮಾಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದಾರೆ.
ರಷ್ಯಾ ಯುದ್ಧ ತೀವ್ರಗೊಳಿಸುತ್ತಿದ್ದಂತೆ ಉಕ್ರೇನ್ ಪ್ರಜೆಗಳಿಗೆ ಮನವಿ ಮಾಡಿದ ಝೆಲೆನ್ಸ್ಕಿ, ಧೀರ ಪ್ರಜೆಗಳೇ ಉಕ್ರೇನ್ ಧ್ವಜ ಹಿಡಿದು, ಶಸ್ತ್ರಾಸ್ತ್ರ ಹಿಡಿದು ರಷ್ಯಾ ವಿರುದ್ಧ ಸೆಣೆಸಾಡಿ. ನಾನು ನಿಮ್ಮೊಂದಿಗೆ ಇರುತ್ತೇನೆ. ನಿಮಗಿಂತ ಮುಂದೆ ಇರುತ್ತೇನೆ ಎಂದು ಉಕ್ರೇನ್ನ 10 ಸಾವಿರಕ್ಕೂ ಹೆಚ್ಚು ನಾಗರಿಕರ ಕೈಗೆ ಸೇನೆ ಶಸ್ತ್ರಾಸ್ತ್ರ ನೀಡಿದೆ.
ಉಕ್ರೇನ್ ಹಿಂದೆ ನಾವಿದ್ದೇವೆ ಎಂದು ಪೋಸ್ ಕೊಟ್ಟಿದ್ದ ಅಮೆರಿಕಾ ಮತ್ತು ನ್ಯಾಟೋ ಪಡೆಗಳು ಈಗ ಕೈ ಎತ್ತಿಬಿಟ್ಟಿವೆ. ನ್ಯಾಟೋ ಸದಸ್ಯ ರಾಷ್ಟ್ರಗಳ ತಂಟೆಗೆ ಬಂದ್ರೆ ಸುಮ್ಮನಿರಲಿಕ್ಕಿಲ್ಲ ಎಂದು ಗುಡುಗಿವೆ.