ಪತ್ನಿಯೊಬ್ಬಳು ಸಂಭೋಗ ಬೆಳೆಸದಂತೆ ಪತಿಗೆ ಹೇಳಿದ್ದ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಪತಿ ಕೋರ್ಟ್ ಮೆಟ್ಟಿಲೇರಿದ್ದ. ಸ್ಥಳೀಯ ಕೋರ್ಟ್ 20 ವರ್ಷಗಳ ಕಾಲ ಶಾರೀರಿಕ ಸಂಬಂಧ ಬೆಳೆಸಬಾರದು ಎಂದಿತ್ತು.
ಆದರೆ ಪತಿ, ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ವಿಚಾರಣೆ ಕೈಗೆತ್ತಿಕೊಂಡ ಇಂಗ್ಲೆಂಡ್ ಮತ್ತು ವೇಲ್ಸ್ ಹೈಕೋರ್ಟ್, ಪತ್ನಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಹಕ್ಕು ಪತಿಗಿದೆ. ಮಧ್ಯಪ್ರವೇಶ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದಿದೆ. ಆದರೆ ಲೇಬರ್ ಪಾರ್ಟಿ ನಾಯಕರೊಬ್ಬರು ಒತ್ತಾಯದ ಸೆಕ್ಸ್ ಕಾನೂನು ಬಾಹಿರ. ಪತ್ನಿ ಒಪ್ಪಿಗೆಯಿಲ್ಲದೆ ಪತಿ ಸಂಬಂಧ ಬೆಳೆಸಿದ್ರೆ ಇದು ಅತ್ಯಾಚಾರವಾಗಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.