ಬ್ರಿಟನ್ ಸಂಸದರ ಕಚೇರಿಯಲ್ಲಿ ಕಸ ನಿರ್ವಹಣೆ ಮಾಡುವವರಿಗೆ ಏನೇನು ಸಿಗುತ್ತಿದೆ ಗೊತ್ತಾ?!
ಬ್ರಿಟನ್ ನ ಸಂಸದರ ಕಚೇರಿಗಳಲ್ಲಿ ಬಳಸಿದ ಕಾಂಡೋಮ್ ಗಳು, ಕಸ, ವಾಂತಿ ತೆಗೆಯುವುದೇ ಕಸ ನಿರ್ವಹಣೆ ಮಾಡುವವರಿಗೆ ತಲೆನೋವಾಗಿ ಪರಿಣಮಿಸಿದೆಯಂತೆ!
ಇಲ್ಲಿ ಬಳಸಿದ ಕಾಂಡೋಮ್ ಗಳು ಸಿಗುತ್ತಿರುವುದು ಮಾಮೂಲಾಗಿದೆ. ಸಂಸದರ ಈ ರೀತಿಯ ವರ್ತನೆಯಿಂದ ನಮಗೂ ಸಾಕಾಗಿ ಹೋಗಿದೆ ಎಂದು ಕಸ ನಿರ್ವಹಣೆಕಾರರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರಂತೆ. ಹೀಗಂತ ಇಲ್ಲಿನ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಇದೀಗ ಸಂಸದರ ಈ ಖಯಾಲಿಗೆ ಕಡಿವಾಣ ಹಾಕಿ ಜವಾಬ್ಧಾರಿಯುತವಾಗಿ ನಡೆದುಕೊಳ್ಳಲು ತಕ್ಕ ಕ್ರಮ ಕೈಗೊಳ್ಳಬೇಕಿದೆ ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.