ಉದ್ಯಮಿ ನೀರವ್ ಮೋದಿ ವಂಚನೆಗೆ ಕೆನಡಾದ ಯುವಕನ ನಿಶ್ಚಿತಾರ್ಥವೇ ಮುರಿದುಬಿತ್ತು!
ಸೋಮವಾರ, 8 ಅಕ್ಟೋಬರ್ 2018 (10:35 IST)
ನವದೆಹಲಿ: ಭಾರತದಲ್ಲಿ ಸಾವಿರಾರು ಕೋಟಿ ರೂ. ಬ್ಯಾಂಕ್ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರ ವ್ಯಾಪಾರಿ ನೀರವ್ ಮೋದಿ ವಂಚನೆಯಿಂದ ಕೆನಡಾದ ವ್ಯಕ್ತಿಯೊಬ್ಬನ ನಿಶ್ಚಿತಾರ್ಥ ಮುರಿದು ಬಿದ್ದಿದೆ.
ನೀರವ್ ಮೋದಿ ಕೆನಡಾದ ಯುವಕನೊಬ್ಬನಿಗೆ ಮಾರಾಟ ಮಾಡಿದ್ದ ವಜ್ರದ ಉಂಗುರ ನಕಲಿಯಾಗಿದ್ದು, ಇದರಿಂದಾಗಿ ಆತನ ವಿವಾಹವೇ ಮೊಟಕುಗೊಂಡಿದೆ.
2012 ರಲ್ಲಿ ನೀರವ್ ಮೋದಿಯನ್ನು ಭೇಟಿಯಾಗಿದ್ದ ಕೆನಡಾದ ಅಲ್ಫೋನ್ಸೋ ಎಂಬಾತ ಈತನ ಮಾತುಕತೆಯಿಂದ ಇಂಪ್ರೆಸ್ ಆಗಿ ಎರಡು ವಜ್ರದ ಉಂಗುರ ಖರೀದಿಸಿದ್ದನಂತೆ. ಆದರೆ ಈ ಉಂಗುರದ ಜತೆಗೆ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡುವ ವೇಳೆಗೆ ಇದು ನಕಲಿ ಎಂದು ಗೊತ್ತಾಗಿ ಮದುವೆ ಮುರಿದುಬಿದ್ದಿದೆಯಂತೆ. ಇದೇ ಕಾರಣಕ್ಕೆ ಇದೀಗ ಈತ ಖಿನ್ನತೆಗೊಳಗಾಗಿದ್ದಾನೆ ಎಂದು ವಿದೇಶೀ ಪತ್ರಿಕೆಯೊಂದು ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.