ಬೀಜಿಂಗ್ : ರಷ್ಯಾದ ಮೇಲೆ ಅಮೆರಿಕ ಯುರೋಪಿಯನ್ ದೇಶಗಳು ಸೇರಿದಂತೆ ಹಲವು ದೇಶಗಳು ನಾನಾ ಆರ್ಥಿಕ ನಿರ್ಬಂಧಗಳನ್ನು ಹೇರಿದೆ.
ಈ ಬೆನ್ನಲ್ಲೇ ರಷ್ಯನ್ ಉದ್ಯಮಿಗಳು ಮತ್ತು ಕಂಪನಿಗಳು ತಮ್ಮ ದೇಶದಲ್ಲಿರುವ ಚೀನಾ ಮೂಲದ ಬ್ಯಾಂಕ್ಗಳಲ್ಲಿ ಖಾತೆ ಆರಂಭಿಸುತ್ತಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಚೀನಾದ ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಅಗ್ರಿಕಲ್ಚರ್ ಬ್ಯಾಂಕ್ ಆಫ್ ಚೀನಾ ಹೀಗೆ ಮೊದಲಾದವುಗಳು ಹಲವು ವರ್ಷಗಳಿಂದ ಸೇವೆಸಲ್ಲಿಸುತ್ತಿದೆ.
ಕಳೆದ ಕೆಲವು ದಿನಗಳಿಂದ ಈ ಬ್ಯಾಂಕ್ಗಳಲ್ಲಿ ರಷ್ಯಾದ ಮೂಲದ 200 ರಿಂದ 300 ಉದ್ಯಮಿಗಳು ಹೊಸ ಬ್ಯಾಂಕ್ ಖಾತೆ ತೆರದಿದ್ದಾರೆ ಎಂದು ಬ್ಯಾಂಕ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.