ಚೀನಾ-ಭಾರತದ ಸಂಬಂಧ ಹದಗೆಡುತ್ತಿದೆ : ಜೈಶಂಕರ್

ಭಾನುವಾರ, 20 ಫೆಬ್ರವರಿ 2022 (11:44 IST)
ನವದೆಹಲಿ : ಬೀಜಿಂಗ್ ಗಡಿ ಒಪ್ಪಂದ ಉಲ್ಲಂಘಿಸಿದ ಬಳಿಕ ಚೀನಾದೊಂದಿಗಿನ ಭಾರತದ ಸಂಬಂಧ ಹದಗೆಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.

ಮ್ಯೂನಿಚ್ ಸೆಕ್ಯೂರಿಟಿ ಕಾನ್ಫರೆನ್ಸ್ (ಎಂಎಸ್ಸಿ) 2022 ಪ್ಯಾನಲ್ ಚರ್ಚೆಯಲ್ಲಿ ಮಾತನಾಡಿದ ಜೈಶಂಕರ್, ಕಳೆದ 45 ವರ್ಷಗಳಿಂದ ಚೀನಾ-ಭಾರತದ ಗಡಿಯಲ್ಲಿ ಶಾಂತಿ ಇತ್ತು.

1975ರಿಂದ ಗಡಿಯಲ್ಲಿ ಯಾವುದೇ ಮಿಲಿಟರಿ ಸಾವು-ನೋವುಗಳು ಸಂಭವಿಸುತ್ತಿರಲಿಲ್ಲ. ಆದರೆ ಇದೀಗ ಚೀನಾದಿಂದ ಭಾರತಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.

ಗಡಿ ಎಂಬುವುದು ಇರುವುದೇ ಮಿಲಿಟರಿ ಪಡೆ ಅಥವಾ ವಿದೇಶಿಗರ ಅಕ್ರಮ ಪ್ರವೇಶವನ್ನು ನಿಯಂತ್ರಿಸಲು. ಆದರೆ ಈ ಒಪ್ಪಂದವನ್ನು ಚೀನಾ ಉಲ್ಲಂಘಿಸಿದೆ. ಇದೀಗ ಚೀನಾದೊಂದಿಗಿನ ಸಂಬಂಧ ಬಹಳ ಕಷ್ಟಕರ ಹಂತ ತಲುಪಿದೆ ಎಂದು ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ