ಪ್ರಜೆಗಳನ್ನು ಸ್ಥಳಾಂತರಿಸಿದ ಚೀನಾ!

ಭಾನುವಾರ, 6 ಮಾರ್ಚ್ 2022 (13:28 IST)
ಬೀಜಿಂಗ್ : ರಷ್ಯಾ ಉಕ್ರೇನ್ ಯುದ್ಧ ಆರಂಭವಾದ 10 ದಿನಗಳ ನಂತರ ಚೀನಾ ತನ್ನ ದೇಶದ ಪ್ರಜೆಗಳನ್ನು ಉಕ್ರೇನ್ನಿಂದ ಸ್ಥಳಾಂತರಿಸಲು ಆರಂಭಿಸಿದೆ.
ಭಾರತ 1 ವಾರದ ಹಿಂದಿನಿಂದಲೇ ತನ್ನ ಪ್ರಜೆಗಳನ್ನು ರಕ್ಷಣೆ ಮಾಡಲು ಆರಂಭಿಸಿತ್ತು. ಆದರೆ ಚೀನಾ ಸುಮ್ಮನಿದ್ದ ಬಗ್ಗೆ ಚೀನೀಯರೇ ಕಿಡಿಕಾರಿದ್ದರು. ಇದಾದ ಕೆಲವು ದಿನಗಳ ಬಳಿಕ ಚೀನಾ ತನ್ನವರ ರಕ್ಷಣೆಗೆ ಮುಂದಾಗಿದೆ.

ಶನಿವಾರ ಚೀನಾದ ಏರ್ ಚೀನಾ ಸಂಸ್ಥೆಯ ಸಿಎ702 ಚಾರ್ಟರ್ಡ್ ವಿಮಾನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ನಿಂದ ಚೀನಾಗೆ ಬಂದು ತಲುಪಿದೆ. ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಸುಮಾರು 3 ಸಾವಿರ ಚೀನಾ ಪ್ರಜೆಗಳನ್ನು ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ಸ್ಥಳಾಂತರಿಸಿದ್ದು, ಅಲ್ಲಿಂದ ಸ್ವದೇಶಕ್ಕೆ ಕರೆತರುತ್ತಿದೆ.

ಚೀನಾ ಬಳಕೆ ಮಾಡುತ್ತಿರುವ ಈ ವಿಮಾನಗಳು ಒಂದು ಬಾರಿಗೆ ಸುಮಾರು 301 ಜನರನ್ನು ಒಂದು ಬಾರಿಗೆ ಕರೆದೊಯ್ಯಲಿವೆ. ರೊಮೆನಿಯಾದಿಂದ ಚೀನಾದ ಪ್ರಜೆಗಳನ್ನು ಸ್ಥಳಾಂತರಿಸಲು ಶನಿವಾರ ಮತ್ತು ಭಾನುವಾರ ಚೀನಾ ಏರ್ನ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ