ಕೊರೊನಾ ಎಫೆಕ್ಟ್ ; ತಬ್ಬಿಕೊಳ್ಳಲಾಗದೆ ಕಣ್ಣೀರಿಟ್ಟ ತಾಯಿ-ಮಗಳು

ಸೋಮವಾರ, 10 ಫೆಬ್ರವರಿ 2020 (06:01 IST)
ಚೀನಾ : ಮಾರಣಾತಿಕ ಕೊರೊನಾ ವೈರಸ್ ಗೆ ಚೀನಾದಲ್ಲಿ ಅನೇಕ ಮಂದಿ ಸಾವನಪ್ಪಿದ್ದು, ಈ ಕೊರೊನಾ ವೈರಸ್ ಆತಂಕಕ್ಕೆ ಹೆದರಿ ತಾಯಿ ತನ್ನ  ಮಗಳನ್ನು ತಬ್ಬಿಕೊಳ್ಳಲಾಗದೆ ಪರದಾಡಿದ ಮನಕಲಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಹೌದು. ಕೊರೊನಾ ವೈರಸ್ ಸೋಂಕಿಗೆ ತುತ್ತಾದವರ ಸೇವೆಯಲ್ಲಿ ತೊಡಗಿದ್ದ ನರ್ಸ್ ಗೆ  ತನ್ನ ಮಗಳು ಊಟ ತಂದುಕೊಟ್ಟ ವೇಳೆ ಕೊರೊನಾ ತನ್ನ ಮಗಳಿಗೆ ಹರಡುತ್ತೇ ಎಂಬ ಆತಂಕದಿಂದ ಆಕೆಯನ್ನು ತಬ್ಬಿಕೊಳ್ಳಲಾಗದೆ  ದೂರದಿಂದಲ್ಲೇ  ತಾಯಿ-ಮಗಳು ಕಣ್ಣೀರು ಹಾಕುತ್ತಾ ಅಪ್ಪಿಕೊಂಡಂತೆ ಕೈ ಚಾಚಿದ್ದಾರೆ.


ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ತಾಯಿ ಮಗಳನ್ನು ಕಂಡು ಹಲವರು ಕಣ್ಣೀರು ಸುರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ