ಕೊರೊನಾವೈರಸ್ ಭೀತಿ: ದೇಶದಲ್ಲೂ ಕಟ್ಟೆಚ್ಚರ
ಇನ್ನು, ಸೌದಿ ಅರೇಬಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ಕೇರಳ ಮೂಲದ ನರ್ಸ್ ಗೆ ಕೊರೊನಾವೈರಸ್ ತಗುಲಿದ ಶಂಕೆ ವ್ಯಕ್ತವಾಗಿತ್ತು. ಆದರೆ ಆಕೆಗೆ ವೈರಸ್ ತಗುಲಿಲ್ಲ ಎಂದು ಭಾರತೀಯ ರಾಯಭಾರಿ ಇಲಾಖೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ಇದುವರೆಗೆ ಈ ಮಾರಣಾಂತಿಕ ವೈರಸ್ ತಗುಲಿದ ವರದಿಯಾಗಿಲ್ಲ. ಹಾಗಿದ್ದರೂ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.