ಪಂದ್ಯ ವೀಕ್ಷಿಸಿದ್ದಕ್ಕೆ ಭಾರಿ ಬೆಲೆ ತೆತ್ತ ಯುವತಿ

ಬುಧವಾರ, 22 ನವೆಂಬರ್ 2023 (10:57 IST)
ಲಂಡನ್‌ನಲ್ಲಿ ಕಾನೂನು ಪದವಿ ಪಡೆದಿರುವ ಘೋಂಚೇಚ್‌ ಗಾವಮಿ, ಕಳೆದ ಜೂನ್ ತಿಂಗಳಲ್ಲಿ ಟೆಹ್ರಾನ್ ಕ್ರೀಡಾಂಗಣದಲ್ಲಿ ಇರಾನ್ ರಾಷ್ಟ್ರೀಯ ವಾಲಿಬಾಲ್ ತಂಡ ಪಾಲ್ಗೊಂಡಿದ್ದ ಪಂದ್ಯವನ್ನು ವೀಕ್ಷಿಸಲು ತೆರಳಿದ ಸಮಯದಲ್ಲಿ  ಅವರನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ನ್ಯಾಯಾಲಯದಲ್ಲಿ ಆಕೆಯ ವಿಚಾರಣೆ ನಡೆದಿತ್ತು.
 
ಪುರುಷರ ವಾಲಿಬಾಲ್ ಪಂದ್ಯನ್ನು ವೀಕ್ಷಿಸಲು ಪ್ರಯತ್ನಿಸಿದ ಕಾರಣಕ್ಕೆ ಬ್ರಿಟಿಷ್-ಇರಾನಿಯನ್ ಮಹಿಳೆಯೊಬ್ಬರನ್ನು ಬಂಧಿಸಿ, ಒಂದು ವರ್ಷದ ಶಿಕ್ಷೆ ವಿಧಿಸಲಾಗಿದೆ.
 
ಪುರುಷರ ಪಂದ್ಯ ವೀಕ್ಷಿಸುವುದಕ್ಕೆ ಮಹಿಳೆಯರಿಗೆ ನಿಷೇಧವಿದ್ದರೂ ಗಾವಮಿ, ಇತರ ಮಹಿಳಾ ಪ್ರತಿಭಟನಾಕಾರರ ಜತೆ ಇರಾನ್ ಮತ್ತು ಇಟಲಿ ನಡುವೆ ನಡೆದ ಪುರುಷರ ವಾಲಿಬಾಲ್ ಪಂದ್ಯ ವೀಕ್ಷಿಸಲು ಪ್ರಯತ್ನಿಸಿದ್ದರು. ಆಗ ಆಕೆಯನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು ಮತ್ತು ಕೆಲವು ದಿನಗಳ ಬಳಿಕ ಮತ್ತೆ ಬಂಧಿಸಲಾಗಿತ್ತು.
 
ಆಡಳಿತ ವ್ಯವಸ್ಥೆ ವಿರುದ್ಧ ಪ್ರಚಾರ ಮಾಡಿದ ಆರೋಪದಡಿ ಘೊಂಚೆಕ್ ಘವಮಿ (25) ಬಂಧಿತರಾಗಿರುವುದಾಗಿ ಆಕೆಯ ವಕೀಲ ಮಹಮ್ಮುದ್ ಅಲಿಜದೆಹ್ ತಬತಬೈ  ತಿಳಿಸಿದ್ದಾರೆ. ತನ್ನ ಬಂಧನ ಖಂಡಿಸಿ ಗಾವಮಿ ಧರಣಿಯನ್ನು ಆರಂಭಿಸಿದ್ದಾಳೆ.
 
ಆಕೆಗಿನ್ನೂ ಅಧಿಕೃತವಾಗಿ ಶಿಕ್ಷೆಯನ್ನು ಘೋಷಿಸಿಲ್ಲ, ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಆಕೆಯ ಸಹೋದರ ಇಮಾನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ