ಬೇರೆ ಮದುವೆಗೆ ಅಡ್ಡಿಯಾಗಿದ್ದ ಪ್ರಿಯತಮೆ ಹತ್ಯೆಗೆ ಸಂಚು ರೂಪಿಸಿದ ಭೂಪ

ಸೋಮವಾರ, 20 ನವೆಂಬರ್ 2023 (14:39 IST)
ಅಂತರ್ಜಾಲದಿಂದ ಪಡೆದ ತಂತ್ರಗಳನ್ನು ಬಳಸಿಕೊಂಡು ತಾನು ಬಾಂಬ್ ಜೋಡಿಸಿದೆ ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆತನ ಬೆಡ್ ರೂಮ್ ಪರಿಶೀಲಿಸಿ ವೈರ್ ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 

ತನ್ನ ಗೆಳತಿಯನ್ನು ಗುರಿಯಾಗಿಟ್ಟುಕೊಂಡು ಎಂಜಿನಿಯರಿಂಗ್ ಪದವೀಧರನೊಬ್ಬ ರೂಪಿಸಿದ್ದ ಪಾರ್ಸೆಲ್ ಬಾಂಬ್  ಆತನ ಸ್ನೇಹಿತನ ಮನೆಯಲ್ಲಿ ಸ್ಪೋಟಗೊಂಡು, ಆ ಅಮಾಯಕ ಜೀವನ್ಮರಣದ ನಡುವೆ ಹೋರಾಡುತ್ತಿರುವ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ. 
 
ನ್ಯೂಯಾರ್ಕ್ ನಗರದ ಹೊರವಲಯದಲ್ಲಿರುವ ಪ್ರದೇಶದಲ್ಲಿ ಈ ದುರ್ಘಟನೆ ವರದಿಯಾಗಿದೆ. ಆರೋಪಿ ಕಿಮ್ ಜಾನ್ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದ್ದು ಆತನನ್ನು ಬಂಧಿಸಾಗಿದೆ. 
 
ಸ್ಯಾಂಡಿ ಕೆಲವಿನ್ ಎಂಬ ಹೆಸರು ಬರೆದ ಎನ್‌ವಲೆಪ್‌ನ್ನು ಆತ ಸಿದ್ಧಗೊಳಿಸಿದ. ಆದರೆ ರವಾನಿಸಲು ಆಗಲಿಲ್ಲ. ತನ್ನ ಸ್ನೇಹಿತನಲ್ಲಿ  ಬಳಿ ಆ  ಪಾರ್ಸೆಲ್ ಕಳುಹಿಸುವಂತೆ ಆತ ಹೇಳಿದ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಆದರೆ ಕುತೂಹಲ ತಾಳಲಾರದೇ ಅದನ್ನು ತೆರೆದ ಗೆಳೆಯ ಅದರಲ್ಲಿದ್ದ ಗೊಂಬೆಗೆ ಪ್ಲಗ್ ಜೋಡಿಸಿದ. ತಕ್ಷಣ ಬಾಂಬ್ ಸ್ಪೋಟಗೊಂಡಿತು. ಈಗ ಆತ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ.  ಎಂಜಿನಿಯರಿಂಗ್ ಯುವತಿಯನ್ನು ಮದುವೆಯಾಗಿರುವ ಆರೋಪಿ ಇನ್ನೊಬ್ಬ ಯುವತಿಯ ಜತೆ ಸಂಬಂಧ ಹೊಂದಿದ್ದ. 
 
"ನಾವು ಆರೋಪಿಯ ಗೆಳೆಯ ಚೇತರಿಸಿಕೊಳ್ಳುವುದನ್ನು ಕಾಯುತ್ತಿದ್ದೇವೆ. ಸ್ಯಾಂಪಲ್ಸ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಆ ಪಾರ್ಸೆಲ್ ಕಳುಹಿಸಲು ನಿರ್ಧರಿಸಿದ್ದಆರೋಪಿಯ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ " ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ