ತನ್ನನ್ನು ನೋಡಲು ಬರುತ್ತಿರುವ ಪೋಷಕರನ್ನು ತಡೆಯಲು ವಿದ್ಯಾರ್ಥಿಯೊಬ್ಬ ಮಾಡಿದ್ದೇನು ಗೊತ್ತಾ?

ಭಾನುವಾರ, 27 ಜನವರಿ 2019 (07:23 IST)
ಪ್ಯಾರಿಸ್ : ದೂರದೂರಿನಲ್ಲಿ  ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ತಮ್ಮ ತಂದೆತಾಯಿಯನ್ನು ನೋಡಲು ಹಾತೊರೆಯುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಹುಡುಗ ತನ್ನನ್ನು ನೋಡಲು ಬರುತ್ತಿದ್ದ ತಂದೆ ತಾಯಿಯನ್ನು ತಡೆಯಲು ಮಾಡಿದ ಘನಕಾರ್ಯವೆನೆಂದು ಕೇಳಿದರೆ ಶಾಕ್ ಆಗ್ತೀರಾ.

ಹೌದು. ಪಶ್ಚಿಮ ಫ್ರಾನ್ಸಿನ ರೆನೆಸ್‍ನಲ್ಲಿ ಓದುತ್ತಿದ್ದ 23 ವರ್ಷದ ವಿದ್ಯಾರ್ಥಿಯೊಬ್ಬ ತನನ್ನು ನೋಡಲು ಬರುತ್ತಿದ್ದ ತಂದೆ ತಾಯಿಯನ್ನು ತಡೆಯಲು ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಈಸಿ ಜೆಟ್ ಏರ್‌ಲೈನ್ಸ್ ಗೆ ಕರೆ ಮಾಡಿ ಸುಳ್ಳು ಹೇಳಿದ್ದಾನೆ. ಈ ಸುಳ್ಳು ಕರೆಯಿಂದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಭಯಪಟ್ಟಿದ್ದರಿಂದ ದಾರಿ ಮಧ್ಯದಲ್ಲೇ ಈಸಿ ಜೆಟ್ ವಿಮಾನ ಹಿಂತಿರುಗಿತ್ತು. ಅಲ್ಲದೆ ಈ ಸುದ್ದಿ ಹಿಂದೆ ಭಯೋತ್ಪಾದಕರ ಕೈವಾಡವಿರಬಹುದಾ ಎಂದು ಶಂಕಿಸಿಲಾಗಿತ್ತು.

 

ಆದರೆ ಈ ಸುದ್ದಿ ಸುಳ್ಳು ಅಂತ ಗೊತ್ತಾದ ಮೇಲೆ ತನಿಖೆ ನಡೆಸಿದಾಗ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದು, ಆತ ತನ್ನ ತಪ್ಪನ್ನು ಕೂಡ ಒಪ್ಪಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಇದೀಗ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಒಂದು ವೇಳೆ  ವಿದ್ಯಾರ್ಥಿಯ ಮೇಲಿನ ಆರೋಪ ಸಾಬೀತಾದರೆ ನ್ಯಾಯಾಲಯವು ಸುಮಾರು 5 ವರ್ಷಗಳ ಕಾಲ ಜೈಲು ಶಿಕ್ಷೆ, 85 ಸಾವಿರ ಡಾಲರ್(ಅಂದಾಜು 60 ಲಕ್ಷ ರೂ.) ದಂಡ ವಿಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ