ನೀವೂ ಹೇರ್ ಡೈ ಮಾಡಿಕೊಳ್ಳುತ್ತೀರಾ...? ಹಾಗಾದ್ರೆ ಇಲ್ಲಿದೆ ನೋಡಿ ಬೆಚ್ಚಿಬೀಳಿಸುವ ಸುದ್ದಿ
ಮಂಗಳವಾರ, 4 ಡಿಸೆಂಬರ್ 2018 (07:27 IST)
ಪ್ಯಾರಿಸ್ : ಹೇರ್ ಡೈ ಮಾಡಿಸಿಕೊಂಡ ಯುವತಿಯೊಬ್ಬಳ ತಲೆಯ ಗಾತ್ರ ಇದ್ದಕ್ಕಿದ್ದಂತೆಯೆ ದುಪ್ಪಟ್ಟಾದ ವಿಚಿತ್ರ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ.
ಹೌದು. 19 ವರ್ಷದ ಎಸ್ಟಿಲ್ ಎಂಬಾಕೆ ಈ ವಿಚಿತ್ರ ಘಟನೆಗೆ ಒಳಗಾದ ಯುವತಿ. ಈಕೆ ಸ್ಥಳೀಯ ಮಾರ್ಕೆಟ್‌ನಿಂದ ಕೂದಲಿಗೆ ಹಚ್ಚಿಕೊಳ್ಳಲು ಹೇರ್ ಡೈ ಖರೀದಿಸಿ ನಂತರ ಆಕೆ ಡೈ ಪ್ಯಾಕೆಟ್‌ನಲ್ಲಿ ನೀಡಲಾದ ಸೂಚನೆಯಂತೆ ಬಣ್ಣವನ್ನು ತಲೆಗೆ ಹಚ್ಚಿಕೊಂಡಿದ್ದಾಳೆ.
ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಉಸಿರಾಡಲು ಕಷ್ಟವಾಗಿದ್ದು, ತಲೆಯಲ್ಲಿ ಸಹಿಸಲು ಅಸಾಧ್ಯವಾದ ತುರಿಕೆ ಕಾಣಿಸಿಕೊಂಡಿದೆ. ಆದರೆ ಮರುದಿನ ಬೆಳಗ್ಗೆ ಎದ್ದು ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಬೆಚ್ಚಿ ಬಿದ್ದಿದ್ದಾಳೆ. ಯಾಕೆಂದರೆ ಆಕೆಯ ತಲೆಯ ಗಾತ್ರ ಇದ್ದಕ್ಕಿದ್ದಂತೆ ದುಪ್ಪಟ್ಟಾಗಿದೆ. ತಲೆಯ ಸುತ್ತಳತೆ ತೆಗೆದಾಗ ಬರೋಬ್ಬರಿ 63 ಸೆಂ. ಮೀಟರ್ ಆಗಿದೆ. ಆಕೆಯ ತಲೆಯಷ್ಟೇ ಅಲ್ಲದೇ, ನಾಲಗೆ ಗಾತ್ರ ಹೆಚ್ಚಾಗಲಾರಂಭಿಸಿದೆ.
ಇದರಿಂದ ಭಯಗೊಂಡ ಆಕೆ ವೈದ್ಯರನ್ನು ಭೇಟಿಯಾದಾಗ ಹೆರ್ ಡೈನಲ್ಲಿದ್ದ PPD (Paraphenylenediamin) ಎಂಬ ಕೆಮಿಕಲ್‌ನಿಂದ ರಿಯಾಕ್ಷನ್ ಆಗಿದೆ ಎಂದು ತಿಳಿಸಿದ್ದಾರೆ. ಹೇರ್‌ಡೈನಲ್ಲಿರುವ PPDಹೆಸರಿನ ಕೆಮಿಕಲ್ ಸಾಮಾನ್ಯವಾಗಿ ಎಲ್ಲಾ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಸುತ್ತಾರೆ. ಆದರೆ ಎಸ್ಟಿಲ್ ಮಾಡಿದ ಎಡವಟ್ಟೆನೆಂದರೆ ಸೂಚನೆಯಲ್ಲಿ ತಿಳಿಸಿದ್ದಂತೆ ಪ್ಯಾಚ್ ಟೆಸ್ಟ್‌ನಲ್ಲಿ ಹೇರ್‌ಡೈ ಮಾಡಿ 48 ಗಂಟೆಗಳವರೆಗೆ ಯಾವುದೇ ರಿಯಾಕ್ಷನ್ ಆಗದಿದ್ದರೆ ತಲೆಗೆ ಹಚ್ಚಿಕೊಳ್ಳಲು ತಿಳಿಸಲಾಗಿತ್ತು. ಆದರೆ ಎಸ್ಟಿಲ್ ಟ್ರಯಲ್ ಮಾಡಿದ ಕೇವಲ 30 ನಿಮಿಷಗಳೊಳಗೆ ತಲೆಗೆ ಹಚ್ಚಿಕೊಂಡಿದ್ದಳು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.