ತಲೆಹೊಟ್ಟನ್ನು ನಿವಾರಿಸಲು ಈಕೆ ಬಳಸುತ್ತಿದ್ದದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ
ಮಂಗಳವಾರ, 2 ಏಪ್ರಿಲ್ 2019 (06:16 IST)
ನ್ಯೂಜಿಲೆಂಡ್ : ಕೆಲವರು ತಲೆಹೊಟ್ಟನ್ನು ನಿವಾರಿಸಲು ಶಾಂಪುಗಳ ಮೋರೆ ಹೋದರೆ, ಕೆಲವರು ಮನೆಮದ್ದುಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಅರಣ್ಯ ಸುತ್ತುತ್ತಿರುವ ನ್ಯೂಜಿಲೆಂಡ್ ನ ಮಹಿಳೆಯೊಬ್ಬಳು ತನ್ನ ತಲೆಹೊಟ್ಟನ್ನು ನಿವಾರಿಸಿಕೊಳ್ಳುಲು ಏನನ್ನು ಬಳಸುತ್ತಿದ್ದಳು ಎಂದು ಕೇಳಿದರೆ ನೀವೇ ಶಾಕ್ ಆಗ್ತೀರಾ.
ಹೌದು. ನ್ಯೂಜಿಲೆಂಡ್ ನ ದಂಪತಿ ಮಿರಿಯಮ್ ಲ್ಯಾನ್ಸ್ ವುಡ್ ಮತ್ತು ಆಕೆಯ ಪತಿ ಪೀಟರ್ ಎಂಬವರು ಅರಣ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸವಾಗಿದ್ದರು. ಈ ಸಮಯದಲ್ಲಿ ಮಿರಿಯಮ್ ತನ್ನ ತಲೆಯಲ್ಲಿ ಅತಿಯಾದ ತಲೆಹೊಟ್ಟು ಕಂಡುಬಂದಿದ್ದರಿಂದ ಶಾಂಪೂ ಇಲ್ಲದೆ ಆಕೆಗೆ ತುಂಬಾ ಸಮಸ್ಯೆಯಾಗಿತ್ತು. ಆಗ ಆಕೆಯ ಪತಿ, ಎಸ್ಕಿಮೊಗಳು ಬೆಳಗ್ಗಿನ ಮೂತ್ರ ಬಳಸಿಕೊಂಡು ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳುತ್ತಲಿದ್ದರು ಎಂದು ಹೇಳಿದ್ದಾನೆ.
ಆಗ ಆಕೆ ತನ್ನ ತಲೆಹೊಟ್ಟನ್ನು ನಿವಾರಿಸಿಕೊಳ್ಳಲು ತನ್ನ ಬೆಳಗಿನ ಮೂತ್ರವನ್ನು ಡಬ್ಬದಲ್ಲಿ ತುಬ್ಬಿಸಿಕೊಂಡು ತಲೆಗೆ ಮಸಾಜ್ ಮಾಡಿ ಸ್ನಾನ ಮಾಡುತ್ತಿದ್ದಳಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.