ಚುನಾವಣೆ ವೇಳೆ ನೀಡಿದ ಆಶ್ವಾಸನೆ ಈಡೇರಿಸದ ಮೇಯರ್ ಗೆ ರೈತರು ಮಾಡಿದ್ದೇನು ಗೊತ್ತಾ?

ಶುಕ್ರವಾರ, 11 ಅಕ್ಟೋಬರ್ 2019 (09:22 IST)
ಮೆಕ್ಸಿಕೊ : ಚುನಾವಣೆಯ ವೇಳೆ ನೀಡಿದ ಆಶ್ವಾಸನೆಯನ್ನು ಈಡೇರಿಸದ ಮೇಯರ್ ರನ್ನು ರೈತರು ಟ್ರಕ್ಕಿನ ಹಿಂಭಾಗಕ್ಕೆ ಕಟ್ಟಿ ಎಳೆದೊಯ್ದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.




ಚಿಯಾಪಾಸ್ ಸ್ಟೇಟ್ ನ ಲಾಸ್ ಮಾರ್ಗರೈಟಿಸ್ ಮುನ್ಸಿಪಾಲ್ಟಿಯ ಮೇಯರ್ ಆಗಿದ್ದ ಜಾರ್ಜ್ ಲೂಯಿಸ್ ಎಸ್ಕಾಂಡನ್ ಹರ್ನಾಂಡೆಜ್ ಎಂಬುವವರು ಚುನಾವಣೆಯ ವೇಳೆ ಕೆಲವು ಭರವಸೆಗಳನ್ನು ನೀಡಿದ್ದು, ಮೇಯರ್ ಆದ ಮೇಲೆ ಆ ಬಗ್ಗೆ ಚಕಾರ ಎತ್ತದಕ್ಕೆ ಕೋಪಗೊಂಡ ರೈತರ ಗುಂಪು ಮೇಯರ್ ನ್ನು ಹಗ್ಗದಿಂದ ಟ್ರಕ್ಕಿನ ಹಿಂಭಾಗಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


ಈ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಲಾಗಿದ್ದು, 11 ಜನರನ್ನು ಬಂಧಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ