ನೇಪಾಳಿ ಶಿಕ್ಷಕಿಗೆ ರೂಮಿಗೆ ಎಳೆದೊಯ್ದ ಶಿಕ್ಷಕ ಮಾಡಿದ್ದೇನು?

ಶನಿವಾರ, 31 ಆಗಸ್ಟ್ 2019 (17:48 IST)
ನೇಪಾಳಿ ಶಿಕ್ಷಕಿಯನ್ನು ಎಲ್ಲರೂ ನೋಡುತ್ತಿರುವಂತೆಯೇ ರೂಮಿಗೆ ಎಳೆದುಕೊಂಡು ಹೋದ ಶಿಕ್ಷಕನೊಬ್ಬ ಮಾಡಬಾರದ್ದನ್ನು ಮಾಡಿದ್ದಾನೆ.

ಶಾಲಾ ಶಿಕ್ಷಕಿಯಾಗಿದ್ದ ಕಲ್ಯಾಣಿ ಹಾಗೂ ಶಿಕ್ಷಕನಾಗಿದ್ದ ಅಜಯ್ ನಡುವೆ ಲವ್ವಿ ಡವ್ವಿ ನಡೆಯುತ್ತಿತ್ತು. ಆದರೆ ಆಗಾಗ್ಗೆ ಸಣ್ಣ ಪುಟ್ಟ ಜಗಳಗಳೂ ನಡೆಯುತ್ತಿದ್ದವು.

ಜಗಳ ವಿಪರೀತವಾದಾಗ ನೇರವಾಗಿ ಶಿಕ್ಷಕಿಯನ್ನು ಆಕೆಯ ರೂಮಿಗೆ ಎಳೆದೊಯ್ದ ಶಿಕ್ಷಕ ಅಜಯ್ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ.
ಅಷ್ಟೇ ಅಲ್ಲದೇ ಚಾಕುವಿನಿಂದ ನೇಪಾಳಿ ಶಿಕ್ಷಕಿಯಾಗಿರೋ ಕಲ್ಯಾಣಿಯನ್ನು ಇರಿದು ಕೊಂದಿದ್ದಾನೆ. ಆರೋಪಿ ಶಿಕ್ಷಕ ಅಜಯ್ ಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಉತ್ತರಖಂಡದ ಋಷಿಕೇಶ್ ನಗರದಲ್ಲಿ ಈ ದುರ್ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ