ತನ್ನ ಚಿತ್ರವಿರುವ ಸಾಕ್ಸ್ ಧರಿಸಿದ ಅಧಿಕಾರಿಗೆ ಟ್ರಂಪ್ ಮಾಡಿದ್ದೇನು ಗೊತ್ತಾ?

ಶನಿವಾರ, 18 ಮೇ 2019 (07:22 IST)
ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯನ್ನು ಒಪ್ಪದವರು ಅವರನ್ನು ಹೇಗೆ ಬೇಕೆಂದರೆ ಹಾಗೇ ಟೀಕಿಸುತ್ತಾರೆ.




ಡೊನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯಿಂದ ಬೇಸತ್ತ ಕೆಲವರು ಅವರ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ಟೈಲೆಟ್ ಕ್ನೀನ್ ಬ್ರಶ್ ಗಳಲ್ಲಿ, ಕಸದ ಬುಟ್ಟಿಯಲ್ಲಿ, ಟೈಲೆಟ್ ಟಿಶ್ಯೂಗಳಲ್ಲಿ ಅವರ ಫೋಟೊವನ್ನು ಮುದ್ರಸುತ್ತಿದ್ದಾರೆ. ಅದೇರೀತಿ ಅಮೇರಿಕಾದ ಅಧಿಕಾರಿಯೊಬ್ಬರು ಟ್ರಂಪ್ ಅವರ ಚಿತ್ರವಿರುವ ಸಾಕ್ಸ್ ಅನ್ನು ಅವರ ಸಮ್ಮುಖದಲ್ಲೇ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.


ಹೌದು, ಟ್ರಂಪ್ ಅವರು ಸರ್ಕಾರಿ ಕಾರ್ಯಕ್ರಮಕ್ಕಾಗಿ ಲೂಸಿಯಾನಾಗೆ ಬಂದಾಗ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಬಿಲ್ಲಿ ನಂಗೆಸ್ಸರ್, ಡೊನಾಲ್ಡ್ ಟ್ರಂಪ್ ಅವರ ಮುಖ ಹಾಗೂ ಕೂದಲಿರುವ ಸಾಕ್ಸ್ ಅನ್ನು ಧರಿಸಿ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡಿದ್ದಾರೆ. ಆದರೆ ಈ ಸಾಕ್ಸ್ ಅನ್ನು ನೋಡಿದ ಟ್ರಂಪ್ ಅವರು ಕೋಪಗೊಳ್ಳದೇ  ಅದನ್ನು ಹಾಸ್ಯಪ್ರಜ್ಞೆಯಿಂದ ಸ್ವೀಕರಿಸಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ