ಭಾರತದ ವಿವಿಧ ಬ್ಯಾಂಕ್ ಗಳಿಂದ ಸುಮಾರು 1.5 ಶತಕೋಟಿ ರೂಪಾಯಿ ಪಡೆದು ಅದನ್ನು ಮರುಪಾವತಿ ಮಾಡದೆ ವಂಚಿಸಿ ಪರಾರಿಯಾದ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನ ವೆಸ್ಟ್ ಎಂಡ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಅಲ್ಲಿ ಹೊಸ ವಜ್ರದ ಉದ್ಯಮವನ್ನು ಆರಂಭಿಸಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನೀರವ್ ಮೋದಿಯನ್ನು ಸಂದರ್ಶನ ಮಾಡಿದ ವಿಡಿಯೋವನ್ನು ಇಂಗ್ಲೆಂಡಿನ ದ ಟೆಲಿಗ್ರಾಫ್ ಪ್ರಕಟಿಸಿದ್ದು, ಅದರಲ್ಲಿ ಪತ್ರಿಕೆಯ ಪ್ರತಿನಿಧಿ ಕೇಳಿದ ಯಾವುದೇ ಪ್ರಶ್ನೆಗಳಿಗೂ ನೀರವ್ ಮೋದಿ ಉತ್ತರಿಸದೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.