ಈ ಚಾಕೋಲೆಟ್ ನ ಬೆಲೆ ಕೇಳಿದ್ರೆ ನಿಮ್ಮ ತಲೆ ತಿರುಗುವುದು ಗ್ಯಾರಂಟಿ!
ಭಾನುವಾರ, 25 ಮಾರ್ಚ್ 2018 (11:54 IST)
ಪೋರ್ಚುಗಲ್: ಚಾಕೋಲೆಟ್ ಎಂದ ತಕ್ಷಣ ಬಾಯಲ್ಲಿ ನೀರು ಸುರಿಸದವರೇ ಇಲ್ಲ ಅನ್ನಬೇಕು. ಯಾಕೆಂದರೆ ಚಾಕೋಲೆಟ್ ನ ಸವಿಯೇ ಅಂತದ್ದು. ಅದರಲ್ಲೂ ಫಾರಿನ್ ಚಾಕೋಲೆಟ್ ಅಂದ ತಕ್ಷಣ ಮತ್ತಷ್ಟು ಕುತೂಹಲ, ತಿನ್ನಬೇಕು ಅನ್ನುವ ಚಪಲ ಜಾಸ್ತಿ. ಆದರೆ ಇಲ್ಲೊಂದು ಚಾಕೋಲೆಟ್ ಇದೆ. ನೋಡುವುದಕ್ಕೆ ಪುಟಾಣಿಯಾದರೂ ಇದರ ಬೆಲೆ ಕೇಳಿದರೆ ತಲೆ ತಿರುಗುತ್ತೆ. ಬೆಲೆ ಎಷ್ಟಾದರೂ ಪರ್ವಾಗಿಲ್ಲ ಅನ್ನುವವರು ಈ ಚಾಕೋಲೆಟ್ ತಿನ್ನಬಹುದು.
ಪೋರ್ಚುಗಲ್ ನಲ್ಲಿ ನಡೆಯುತ್ತಿರುವ ಒಬಿಡೋಸ್ ಚಾಕೋಲೆಟ್ ಉತ್ಸವದಲ್ಲಿ ಈ ದುಬಾರಿಯಾದ ಪುಟಾಣಿ ಚಾಕೋಲೆಟ್ ‘ಗ್ಲೋರಿಯಸ್’ ಅನ್ನು ಪ್ರದರ್ಶನಕ್ಕಿಡಲಾಗಿದೆ. ಇದರ ಬೆಲೆ ಸರಿಸುಮಾರು 6 ಲಕ್ಷ ರೂಪಾಯಿಯಂತೆ!
ಅಂದ ಹಾಗೇ, ಈ ಚಾಕೋಲೆಟ್ ಗೆ ಚಿನ್ನದ ಲೇಪನವನ್ನು ನೀಡಲಾಗಿದೆಯಂತೆ. ಕೇಸರಿ ದಳ, ಮಡಗಾಸ್ಕರ್ ನ ವೆನಿಲ್ಲಾ, ಚಿನ್ನದ ಫ್ಲೇಕ್ಸ್ ಹಾಗೂ ವೈಟ್ ಟ್ರಫಲ್ ಅನ್ನು ಈ ಚಾಕೋಲೇಟ್ ಹೊಂದಿದೆಯಂತೆ. ಇದು ಜಗತ್ತಿನ ಅತ್ಯಂತ ದುಬಾರಿ ಚಾಕೋಲೆಟ್ ಆಗಿದೆ. ಇದನ್ನು ತಯಾರಿಸಿದ್ದು ಡೇನಿಯೆಲ್ ಗೋಮ್ಸ್ ಎಂಬಾತ. ಕಳೆದ ಒಂದು ವರ್ಷದಿಂದ ಇದರ ತಯಾರಿಯಲ್ಲಿ ನಡೆಸಿದ್ದಾನಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ