ರಷ್ಯಾ ನೌಕೆಗಳಿಗೆ ಡಾಲ್ಫಿನ್ ರಕ್ಷಣೆ!?

ಶುಕ್ರವಾರ, 29 ಏಪ್ರಿಲ್ 2022 (09:34 IST)
ನ್ಯೂಯಾರ್ಕ್ :  ಸತತ 2 ತಿಂಗಳಿನಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ಸೇನಾ,
 
ಇದೇ ವೇಳೆ ತನ್ನ ಅತ್ಯಂತ ಆಯಕಟ್ಟಿನ ನೌಕಾ ನೆಲೆಯೊಂದನ್ನು ಕಾಯಲು ತರಬೇತುಗೊಳಿಸಿದ ‘ಡಾಲ್ಫಿನ್ ಪಡೆ’ಯನ್ನು ನಿಯೋಜಿಸಿದೆ. ಈ ಮೂಲಕ ಡಾಲ್ಫಿನ್ಗಳನ್ನು ರಕ್ಷಣೆಗೆ ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

2014ರಲ್ಲಿ ಉಕ್ರೇನ್ನಿಂದ ತಾನು ವಶಪಡಿಸಿಕೊಂಡ ಕಪ್ಪು ಸಮುದ್ರದ ವಲಯದಲ್ಲಿ ಬರುವ ಸೆವಸ್ಟೊಪೋಲ್ ನೌಕಾ ನೆಲೆ ಕಾಯಲು ರಷ್ಯಾ ಸೇನೆ ವಿಶೇಷವಾದ ಡಾಲ್ಫಿನ್ ಪಡೆ ಬಳಸುತ್ತಿದೆ ಎಂದು ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿ ಅಮೆರಿಕದ ನೌಕಾ ಸಂಸ್ಥೆ ವರದಿ ಮಾಡಿದೆ.

ಕಳೆದ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸುವುದಕ್ಕೂ ಕೆಲ ದಿನಗಳ ಮುನ್ನ, ಸೆವಸ್ಟೊಪೋಲ್ ನೌಕಾನೆಲೆ ಪ್ರವೇಶದ ಸ್ಥಳದಲ್ಲಿ ಈ ಡಾಲ್ಫಿನ್ಗಳ ಸಂಚಾರವನ್ನು ಉಪಗ್ರಹ ಚಿತ್ರಗಳು ಸೆರೆಹಿಡಿದಿವೆ.

ಸೆವಸ್ಟೊಪೋಲ್ ರಷ್ಯಾದ ಅತ್ಯಂತ ಮಹತ್ವದ ನೌಕಾ ನೆಲೆ. ಇಲ್ಲಿ ಅದು ಭಾರೀ ಪ್ರಮಾಣದ ಅತ್ಯಾಧುನಿಕ ಯುದ್ಧ ನೌಕೆಗಳು, ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ. ಇದರ ಮೇಲೆ ದಾಳಿ ಮಾಡುವುದು ಉಕ್ರೇನ್ನ ವಾಯುಪಡೆಗೆ ಸಾಧ್ಯವಿಲ್ಲ.

ಆದರೆ ಸಮುದ್ರದಾಳದಿಂದ ಈಜುಗಾರರನ್ನು ಬಳಸಿ ಉಕ್ರೇನ್ ಯಾವುದೇ ದುಷ್ಕೃತ್ಯ ನಡೆಸಬಹುದು ಎಂಬ ಆತಂಕ ರಷ್ಯಾ ಸೇನೆಯನ್ನು ಕಾಡುತ್ತಿದೆ. ಹೀಗಾಗಿ ಇಂಥ ದಾಳಿಕೋರರನ್ನು ತಡೆಯಲು ರಷ್ಯಾ ಸೇನೆ ಡಾಲ್ಫಿನ್ಗಳನ್ನು ನಿಯೋಜಿಸಿದೆ ಎನ್ನಲಾಗಿದೆ.

ಸಮುದ್ರದಲ್ಲಿನ ಜೀವಿಗಳ ಪೈಕಿ ಡಾಲ್ಫಿನ್ ಅತ್ಯಂತ ಚತುರ ಪ್ರಾಣಿ. ಅವುಗಳನ್ನು ಯಾವುದೇ ವಸ್ತು ಪತ್ತೆ ಮಾಡಲು, ನಿರ್ದಿಷ್ಟ ವಲಯದಲ್ಲಿ ಯಾವುದೇ ಚಲನ ವಲನ ಪತ್ತೆ ಮಾಡಲು, ಪ್ರತಿ ದಾಳಿ ನಡೆಸುವ ರೀತಿಯಲ್ಲಿ ತರಬೇತಿ ನೀಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ