‘ದೇಶದಲ್ಲಿ ಕಲ್ಲಿದ್ದಲು ಕೊರತೆಯಾಗಿಲ್ಲ’

ಶನಿವಾರ, 23 ಏಪ್ರಿಲ್ 2022 (20:24 IST)
ರಷ್ಯಾದಿಂದ ಬರುತ್ತಿದ್ದ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ದೇಶದಲ್ಲಿ ಕಲ್ಲಿದ್ದಿಲಿನ ಬಳಕೆ ಹೆಚ್ಚಾಗಿದೆ. ಆದರೆ, ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲು ಕೊರತೆಯಾಗಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಿದ್ಯುತ್ ಘಟಕಗಳಲ್ಲಿ 10 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಆರ್ ಟಿಪಿಎಸ್ ಗೆ ಸಿಂಗರೇಣಿಯಿಂದ ನಿತ್ಯ 7 ರೇಕ್ ಕಲ್ಲಿದ್ದಲು ಬರಬೇಕಿತ್ತು. ಅದನ್ನು 9-10 ರೇಕ್ ಗಳಿಗೆ ಹೆಚ್ಚಿಸಲಾಗಿದೆ. ಮಹಾನದಿ, ಎಮ್ ಪಿಎಲ್ ನಿಂದಲೂ ಕಲ್ಲಿದ್ದಲು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಎರಡು ದೊಡ್ಡ ಕಲ್ಲಿದ್ದಲು ಗಣಿಗಳನ್ನು ಅಲೊಕೇಶನ್ ಮಾಡಲಾಗಿದೆ. ಮಂದಾಕಿನಿ ಕೋಲ್ ಬ್ಲಾಕ್ ಅಲೊಕೇಷನ್ ಮಾಡಿ ಪೂರೈಕೆ ಹೆಚ್ಚಿಸಲಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ