ಡೊನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಇಸ್ರೇಲ್ ನಾಮನಿರ್ದೇಶನ

Krishnaveni K

ಮಂಗಳವಾರ, 8 ಜುಲೈ 2025 (09:45 IST)
Photo Credit: X
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಇಸ್ರೇಲ್ ನಾಮ ನಿರ್ದೇಶನ ಮಾಡಿದೆ. ಶ್ವೇತಭವನದಲ್ಲಿ ನಡೆದ ಭೋಜನಕೂಟದಲ್ಲಿ ಭಾಗಿಯಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾಮನಿರ್ದೇಶನದ ಪ್ರತಿಯನ್ನು ಟ್ರಂಪ್ ಗೆ ಹಸ್ತಾಂತರಿಸಿದ್ದಾರೆ.

ಟ್ರಂಪ್ ಜಾಗತಿಕ ಶಾಂತಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಶ್ರಮವಹಿಸಿದ್ದಾರೆ. ಟ್ರಂಪ್ ಕೆಲಸಕ್ಕೆ ಯಹೂದಿಗಳು ಮಾತ್ರವಲ್ಲ, ಪ್ರಪಂಚದಾದ್ಯಂತ ಜನರು ಮೆಚ್ಚುಗೆ ಹೊಂದಿದ್ದಾರೆ ಎಂದು ನೆತನ್ಯಾಹು ಹೇಳಿದ್ದಾರೆ.

ಇದಕ್ಕೆ ಮೊದಲು ಪಾಕಿಸ್ತಾನ ಕೂಡಾ ಭಾರತದ ಜೊತೆಗಿನ ಯದ್ಧ ನಿಲ್ಲಿಸಿದ್ದಾಗಿ ಟ್ರಂಪ್ ಗೆ ನೊಬೆಲ್ ಪ್ರಶಸ್ತಿ ನೀಡುವಂತೆ ನಾಮನಿರ್ದೇಶನ ಮಾಡಿತ್ತು. ಇದೀಗ ಇರಾನ್ ಜೊತೆಗಿನ ಯುದ್ಧದಲ್ಲಿ ತನ್ನನ್ನು ಬೆಂಬಲಿಸಿ, ಕದನ ವಿರಾಮ ಘೋಷಿಸಲು ಪ್ರಮುಖ ಪಾತ್ರ ವಹಿಸಿದ್ದ ಟ್ರಂಪ್ ಪರವಾಗಿ ಇಸ್ರೇಲ್ ಕೂಡಾ ನಾಮ ನಿರ್ದೇಶನ ಮಾಡಿದೆ.

ಟ್ರಂಪ್ ಗೆ ಮೊದಲು ಅಮೆರಿಕಾದ ಮೂವರು ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ. ರೂಸ್ ವೆಲ್ಟ್, ವುಡ್ರೋ ವಿಲ್ಸನ್ ಮತ್ತು ಬರಾಕ್ ಒಬಾಮಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ