ಭಾರತ-ಚೀನಾ ಜನರನ್ನು ಪ್ರೀತಿಸುವೆ, ಅವರಿಗಾಗಿ ಏನು ಮಾಡಲೂ ಸಿದ್ಧ: ಡೊನಾಲ್ಡ್ ಟ್ರಂಪ್
ಶುಕ್ರವಾರ, 17 ಜುಲೈ 2020 (09:24 IST)
ನ್ಯೂಯಾರ್ಕ್: ಭಾರತ-ಚೀನಾ ಜನರನ್ನು ನಾನು ಪ್ರೀತಿಸುತ್ತೇನೆ. ಅವರ ಶಾಂತಿಗಾಗಿ ಏನು ಮಾಡಲೂ ಸಿದ್ಧ. ಹೀಗಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ನಡೆದಾಗ ಭಾರತವನ್ನು ಬೆಂಬಲಿಸುವುದಾಗಿ ಹೇಳಿದ್ದ ಅಮೆರಿಕಾ ಅಧ್ಯಕ್ಷರು, ಕೊರೋನಾ ಹರಡಿದ ಚೀನಾ ಮೇಲೆ ಹಲವು ರೀತಿಯಲ್ಲಿ ಕೆಂಡಕಾರಿದ್ದರು.
ಆದರೆ ಈಗ ಭಾರತದ ಜತೆ ಚೀನಾ ಮೇಲೆಯೂ ಮೃದು ಧೋರಣೆ ಪ್ರದರ್ಶಿಸಿರುವ ಟ್ರಂಪ್, ಎರಡೂ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ತಮ್ಮ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ.