ಐಸಿಸ್ ಉಗ್ರ ನಾಯಕನ ಕೊಲ್ಲಲು ನೆರವಾಗಿದ್ದು ಇದೇ ನಾಯಿ
ಅಮೆರಿಕಾ ಮಿಲಿಟರಿಗೆ ಸೇರಿದ ನಾಯಿಯ ಫೋಟೋ ಬಿಡುಗಡೆ ಮಾಡಿರುವ ಟ್ರಂಪ್ ಐಸಿಸ್ ಉಗ್ರ ನಾಯಕನನ್ನು ಸದೆಬಡಿಯುವಲ್ಲಿ ಈ ನಾಯಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರ ನಾಯಕನನ್ನು ಬೆನ್ನಟ್ಟಿ ಆತನೇ ಜೀವ ಕೊನೆಗಾಣಿಸುವಂತೆ ಮಾಡಿದ ದಿಟ್ಟ ನಾಯಿ ಇದಾಗಿದೆ. ಈ ಸಂದರ್ಭದಲ್ಲಿ ನಾಯಿಗೆ ಗಾಯವಾಗಿತ್ತು. ಈಗ ಚೇತರಿಸಿಕೊಳ್ಳುತ್ತಿದೆ ಎನ್ನಲಾಗಿದೆ.