ಈ ಪ್ರಾಣಿ ಕಂಡರೆ ಬೆಚ್ಚಿ ಬೀಳ್ತಿದ್ದಾರೆ ಜನರು

ಗುರುವಾರ, 10 ಅಕ್ಟೋಬರ್ 2019 (12:40 IST)
ಬೈಕ್ ಸವಾರರು ಹಾಗೂ ಪಾದಚಾರಿಗಳು ಈ ಪ್ರಾಣಿಗಳನ್ನು ಕಂಡರೆ ಬೆಚ್ಚಿ ಬೀಳ್ತಿದ್ದಾರೆ.

ಬೀದಿ ನಾಯಿಗಳ ಹಾವಳಿಗೆ ಬೆಚ್ಚಿಬಿಳ್ತಿದ್ದಾರೆ ಗ್ರಾಮಸ್ಥರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಹಿಂಡು ಹಿಂಡಾಗಿ  ಸಂಚರಿಸುತ್ತಿರುವ ಬೀದಿ ನಾಯಿಗಳು, ಜನರಲ್ಲಿ ಭಯಕ್ಕೆ ಕಾರಣವಾಗಿವೆ.

ಪಟ್ಟಣದಲ್ಲಿ ಪುರಸಭೆ ಸ್ವಚ್ಛತೆ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಹಲವಾರು ಬಾರಿ ನಾಯಿಗಳು ಬೈಕ್ ಸವಾರರಿಗೆ ಅಡ್ಡ ಬಂದು ಅಪಘಾತಗಳಾಗಿವೆ. ಬೈಕ್ ಸವಾರರು, ಪಾದಚಾರಿಗಳು ಬೀದಿ ನಾಯಿಗಳ ಸ್ಥಳಾಂತರಕ್ಕೆ ಒತ್ತಾಯ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ