ಪ್ರವಾಹದ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ ಕೇರಳದ ವ್ಯಕ್ತಿಗೆ ಗೇಟ್ ಪಾಸ್ ಕೊಟ್ಟ ದುಬೈ ಕಂಪನಿ

ಸೋಮವಾರ, 20 ಆಗಸ್ಟ್ 2018 (11:12 IST)
ದುಬೈ: ತನ್ನದೇ ರಾಜ್ಯ ಕೇರಳದಲ್ಲಿ ಪ್ರವಾಹದಿಂದ ಜನ ತತ್ತರಿಸುತ್ತಿದ್ದರೆ, ಇತ್ತ ಕೇರಳ ಮೂಲದ ದುಬೈನಲ್ಲಿ ಕಂಪನಿಯೊಂದರಲ್ಲಿ ನೌಕರನಾಗಿದ್ದ ವ್ಯಕ್ತಿ ಅಸಂಬದ್ಧ ಹೇಳಿಕೆ ನೀಡಿ ಕೆಲಸ ಕಳೆದುಕೊಂಡಿದ್ದಾನೆ.

ದುಬೈಯ ಲುಲು ಗ್ರೂಪ್ ಇಂಟರ್ನಾಷನಲ್ಸ್ ಎಂಬ ಸಂಸ್ಥೆಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್ ಚೆರು ಪಳಯಟ್ಟು ಕೆಲಸ ಕಳೆದುಕೊಂಡಾತ.

ಈತ ಫೇಸ್ ಬುಕ್ ನಲ್ಲಿ ಕೇರಳದ ಪ್ರವಾಹ ಸಂತ್ರಸ್ತರ ಶುಚಿತ್ವದ ಬಗ್ಗೆ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ. ಇದರಿಂದ ಸಿಟ್ಟಿಗೆದ್ದ ಸಂಸ್ಥೆ ತಕ್ಷಣವೇ ಆತನನ್ನು ವಜಾ ಮಾಡಿದೆ. ವಜಾ ಶಿಕ್ಷೆ ಸಿಕ್ಕಿದ ಮೇಲೆ ಈತ ತನ್ನ ಕಾಮೆಂಟ್ ಗೆ ಕ್ಷಮೆ ಯಾಚಿಸಿದ್ದಾನೆ. ಆದರೂ ಪ್ರಯೋಜನವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ