ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಗೆ ಲಾಲೂ ಪ್ರಸಾದ್ ಯಾದವ್ ಸಲಹೆಗಾರರಂತೆ!
ಹಾಗಂತ ಹೇಳಿರುವುದು ಪಾಕ್ ವಿರೋಧ ಪಕ್ಷದ ನಾಯಕ ಸೈಯದ್ ಖುರ್ಷಿದ್ ಶಾ ಟೀಕೆ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತು ಸದ್ಯಕ್ಕೆ ರಾಂಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಲಾಲೂ ಯಾದವ್ ಗೆ ಇಮ್ರಾನ್ ಖಾನ್ ರನ್ನು ಸೈಯದ್ ಹೋಲಿಕೆ ಮಾಡಿ ಲೇವಡಿ ಮಾಡಿದ್ದಾರೆ.
ಪಾಕ್ ಪ್ರಧಾನಿಯಾದ ಬಳಿಕ ಇಮ್ರಾನ್ ಖಾನ್ ಮೊದಲ ಬಾರಿಗೆ ಪಾಕ್ ಸಂಸತ್ತಿನಲ್ಲಿ ಮಾತನಾಡುವಾಗ ಗದ್ದಲ ಮಾಡುತ್ತಿದ್ದ ವಿಪಕ್ಷಗಳ ವಿರುದ್ಧ ತಾಳ್ಮೆ ಕಳೆದುಕೊಂಡು ಕೂಗಾಡಿದ್ದರು. ಇದೇ ಕಾರಣಕ್ಕೆ ಪಿಪಿಪಿ ನಾಯಕ ಸೈಯದ್ ಖುರ್ಷಿದ್ ಭಾರತೀಯ ರಾಜಕೀಯ ನಾಯಕನಿಗೆ ಇಮ್ರಾನ್ ಖಾನ್ ರನ್ನು ಹೋಲಿಕೆ ಮಾಡಿ ಟೀಕಿಸಿದ್ದಾರೆ.