ಡೋಕ್ಲಾಮ್ ವಿವಾದ: ಭಾರತ-ಚೀನಾ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ- ಅಮೆರಿಕ

ಭಾನುವಾರ, 23 ಜುಲೈ 2017 (15:11 IST)
ವಾಷಿಂಗ್ಟನ್: ಸಿಕ್ಕಿಂ ನ ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಪರಸ್ಪರ ಬೆದರಿಕೆಗಳನ್ನು ಮುಂದುವರೆಸುವುದನ್ನು ಬಿಟ್ಟು ಉಭಯ ರಾಷ್ಟ್ರಗಳು ನೇರಾನೇರ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಶಮನ ಮಾಡಿಕೊಳ್ಳಬೇಕು ಎಂದು ಅಮೆರಿಕ ಸಲಹೆ ಮಾಡಿದೆ. 
 
ಕಳೆದ ಒಂದೂವರೆ ತಿಂಗಳಿನಿಂದಲೂ ಎರಡೂ ರಾಷ್ಟ್ರಗಳ ನಡುವೆ ಉದ್ಭವಿಸಿರುವ ದ್ವೇಷ ಪರಿಸ್ಥಿತಿ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾ ಇಲಾಖೆ ವಕ್ತಾರ ಗ್ಯಾರಿ ರಾಸ್ ಅವರು, ಯಾವುದೇ ದೇಶದ ಪರವಾಗಿ ಮಾತನಾಡಲು ನಿರಾಕರಿಸಿದ್ದಾರೆ. ಭಾರತ ಮತ್ತು ಚೀನಾ ರಾಷ್ಟ್ರಗಳು ಬೆದರಿಕೆ ಅಂಶಗಳನ್ನು ಬದಿಗೆ ಸರಿಸಿ ನೇರಾನೇರ ಮಾತುಕತೆಗೆ ನಡೆಸಿ ಡೋಕ್ಲಾಮ್ ಗಡಿ ಪ್ರದೇಶದ ಕುರಿತು ಉಂಟಾಗಿರುವ ಸೇನಾ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ