ರೈಲ್ವೆ ನಿಲ್ದಾಣದಲ್ಲೇ ಮಹಿಳೆಗೆ ಹೆರಿಗೆ ನೋವು: ಬ್ರಿಡ್ಜ್ ಮೇಲೆಯೇ ಹೆರಿಗೆ ಮಾಡಿಸಿದ್ದ ಸೇನಾ ವೈದ್ಯನಿಗೆ ಭಾರೀ ಮೆಚ್ಚುಗೆ

Sampriya

ಸೋಮವಾರ, 7 ಜುಲೈ 2025 (16:13 IST)
Photo Credit X
ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಲ್ಲೇ ಇದ್ದ ಸೇನಾ ವೈದ್ಯ ಮೇಜರ್ ರೋಹಿತ್ ಬಚ್ವಾಲಾ ರೈಲ್ವೆಯೇ ಸೇತುವೆ ಮೇಲೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.  ಇದೀಗ ವೈದ್ಯನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.  

ಕನಿಷ್ಠ ಉಪಕರಣಗಳು ಮತ್ತು ರೈಲ್ವೆ ಸಿಬ್ಬಂದಿಯ ಕೆಲವು ಸಹಾಯದೊಂದಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. 

ಝಾನ್ಸಿಯ ಮಿಲಿಟರಿ ಆಸ್ಪತ್ರೆಯ 31 ವರ್ಷದ ಸೇನಾ ವೈದ್ಯ ಮೇಜರ್ ರೋಹಿತ್ ಬಚ್ವಾಲಾ ಅವರು ಹೈದರಾಬಾದ್‌ಗೆ ತಮ್ಮ ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದು. ಈ ವೇಳೆ ಸುರಕ್ಷಿತವಾಗಿ ರೋಹಿತ್ ಅವರು ಹೆರಿಗೆ ಮಾಡಿಸಿದ್ದಾರೆ. 

ಸೇನೆಯ ಜನರಲ್ ಉಪೇಂದ್ರ ದ್ವಿವೇಧಿ ಅವರು ಡಾ.ರೋಹಿತ್‌ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಹೆರಿಗೆ ಬಳಿಕ ಮಗು ಮತ್ತು ಬಾಣಂತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ