ಸ್ಥಗಿತಕ್ಕೆ ಕ್ಷಮೆಯಾಚಿಸಿದ ಫೇಸ್‌ಬುಕ್

ಶನಿವಾರ, 9 ಅಕ್ಟೋಬರ್ 2021 (11:01 IST)
ಹೊಸದಿಲ್ಲಿ, ಅ.9 : ವಾರದಲ್ಲಿ ಎರಡನೇ ಬಾರಿಗೆ ಎರಡು ಗಂಟೆ ಕಾಲ ಫೇಸ್ಬುಕ್ ಸೇವೆ ಸ್ಥಗಿತಗೊಂಡ ಬಗ್ಗೆ ಫೇಸ್ಬುಕ್ ಇನ್ಕಾರ್ಪೊರೇಷನ್ ಕ್ಷಮೆ ಯಾಚಿಸಿದೆ.

ಶುಕ್ರವಾರ ತಾಂತ್ರಿಕ ದೋಷದಿಂದಾಗಿ ಎರಡು ಗಂಟೆ ಕಾಲ ಫೇಸ್ಬುಕ್ ಸೇವೆಯಲ್ಲಿ ವ್ಯತ್ಯಯವಾಗಿತ್ತು.
ಶುಕ್ರವಾರದ ದೋಷದಿಂದಾಗಿ ಸಾಮಾಜಿಕ ಜಾಲತಾಣ ವೇದಿಕೆ ಇನ್ಸ್ಟಾಗ್ರಾಂ, ಮೆಸೆಂಜರ್ ಮತ್ತು ವರ್ಕ್ಪ್ಲೇಸ್ ಸೇವೆಯಲ್ಲಿ ವ್ಯತ್ಯಯವಾಗಿತ್ತು ಎಂದು ಕಂಪೆನಿ ದೃಢಪಡಿಸಿದೆ.
"ಕಳೆದ ಕೆಲ ಗಂಟೆಗಳಲ್ಲಿ ನಮ್ಮ ಉತ್ಪನ್ನ ಲಭ್ಯತೆಯಿಂದ ಯಾರಾದರೂ ವಂಚಿತರಾಗಿದ್ದಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ" ಎಂದು ಕಂಪೆನಿ ಹೇಳಿಕೆ ನೀಡಿದೆ. "ಸಮಸ್ಯೆಯನ್ನು ನಾವು ಬಗೆಹರಿಸಿದ್ದೇವೆ. ಎಲ್ಲವೂ ಇದೀಗ ಸಹಜ ಸ್ಥಿತಿಗೆ ಮರಳಿದೆ" ಎಂದು ಸ್ಪಷ್ಟಪಡಿಸಿದೆ.
ಶುಕ್ರವಾರ ಸಂಭವಿಸಿದ ದೋಷದಿಂದಾಗಿ ಹಲವರು ಇನ್ಸ್ಟಾಗ್ರಾಂ ಫೀಡ್ಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗಿರಲಿಲ್ಲ. ಅಂತೆಯೇ ಕೆಲವರು ಫೇಸ್ಬುಕ್ ಮೆಸೆಂಜರ್ನಲ್ಲಿ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗಿರಲಿಲ್ಲ.
ವಾರದಲ್ಲಿ ಎರಡನೇ ಬಾರಿಗೆ ಸೇವೆಯಲ್ಲಿ ವ್ಯತ್ಯಯವಾಗಿರುವುದನ್ನು ಜನಸಾಮಾನ್ಯರು ಟ್ವಿಟ್ಟರ್ನಲ್ಲಿ ಅಣಕಿಸಿದ್ದಾರೆ. "ಬಹುಶಃ ಫೇಸ್ಬುಕ್ ವಾರಕ್ಕೆ 3 ದಿನ ಮಾತ್ರ ಕಾರ್ಯನಿರ್ವಹಿಸುತ್ತದೆ. ಸೋಮವಾರ ಮತ್ತೆ ಶುಕ್ರವಾರ ಮುಚ್ಚಿರುತ್ತದೆ" ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ