ಜಪಾನ್ ನೂತನ ಪ್ರಧಾನಿ ಕಿಶಿದಾ ಅಧಿಕಾರಕ್ಕೆ

ಸೋಮವಾರ, 4 ಅಕ್ಟೋಬರ್ 2021 (13:31 IST)
ಟೋಕಿಯೊ  : ಜಪಾನ್ನ ನೂತನ ಪ್ರಧಾನಿಯಾಗಿ ಮಾಜಿ ವಿದೇಶಾಂಗ ಸಚಿವ ಫುಮಿಯೊ ಕಿಶಿದಾ ಸಂಸತ್ನಿಂದ ಸೋಮವಾರ ಆಯ್ಕೆಯಾದರು.
Photo Courtesy: Google

ಜಪಾನ್ನ ಸಂಸತ್ ಬೆಳಿಗ್ಗೆ ಕಿಶಿದಾ ಅವರನ್ನು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ನೂತನ ನಾಯಕನಾಗಿ ಆಯ್ಕೆ ಮಾಡುವುದಕ್ಕೆ ಮೊದಲಾಗಿಯೇ ನಿರ್ಗಮಿತ ಪ್ರಧಾನಿ ಯೋಶಿದೆ ಸುಗಾ ಅವರು ರಾಜೀನಾಮೆ ಸಲ್ಲಿಸಿದರು.
ಸುಗಾ ಅವರು ಕೇವಲ ವರ್ಷದೊಳಗೆಯೇ ಪದತ್ಯಾಗ ಮಾಡಿದ್ದು, ಕೋವಿಡ್ ಪಿಡುಗನ್ನು ನಿಭಾಯಿಸಿದ ರೀತಿಗೆ ಹಾಗೂ ಜನರ ವಿರೋಧದ ನಡುವೆಯೂ ಒಪಿಂಪಿಕ್ಸ್ ಆಯೋಜಿಸಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದರು.
ಸುಗಾ ಸಂಪುಟದಲ್ಲಿ 20 ಮಂದಿ ಸಚಿವರಿದ್ದರು. ಈ ಪೈಕಿ ಇಬ್ಬರನ್ನು ಮಾತ್ರ ನೂತನ ಸಂಪುಟದಲ್ಲಿ ಉಳಿಸಿಕೊಂಡು, ಉಳಿದಂತೆ ಹೊಸಬರನ್ನೆ ಸಚಿವರನ್ನಾಗಿ ಮಾಡುವ ಸಾಧ್ಯತೆ ಇದೆ. ಸುಗಾ ಸಂಪುಟದಲ್ಲಿ ಇಬ್ಬರು ಮಹಿಳೆಯರಿದ್ದರೆ, ಕಿಶಿದಾ ಸಂಪುಟದಲ್ಲಿ ಮೂವರನ್ನು ಸೇರಿಸಿಕೊಳ್ಳುವ ನಿರೀಕ್ಷೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ