ಇನ್ ಸ್ಟಾ, ಫೇಸ್ ಬುಕ್, ವ್ಯಾಟ್ಸಪ್ ಏಕಕಾಲಕ್ಕೆ ಸ್ಥಗಿತ!

ಮಂಗಳವಾರ, 5 ಅಕ್ಟೋಬರ್ 2021 (09:15 IST)
ನವದೆಹಲಿ: ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಪ್ರಮುಖ ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ವ್ಯಾಟ್ಸಪ್ ಕಾರ್ಯಾಚರಣೆ ಸ್ಥಗಿತಗೊಂಡಿದೆ.


ಇದರಿಂದ ಬಳಕೆದಾರರು ಗಲಿಬಿಲಿಗೊಳಗಾದ ಘಟನೆ ನಡೆದಿದೆ. ಸುಮಾರು 6 ಗಂಟೆಗಳ ಕಾಲ ಜಾಗತಿಕವಾಗಿ ಈ ಸೋಷಿಯಲ್ ಮೀಡಿಯಾ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಟ್ವಿಟರ್ ನಲ್ಲಿ ಬಳಕೆದಾರರು ಮೆಮೆಗಳ ಮೂಲಕ ಫೇಸ್ ಬುಕ್ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದರು.

ವ್ಯಾಟ್ಸಪ್ ನಲ್ಲಿ ಯಾವುದೇ ಸಂದೇಶ ಕಳುಹಿಸಲಾಗುತ್ತಿರಲಿಲ್ಲ ಮತ್ತು ಸ್ವೀಕೃತವಾಗುತ್ತಿರಲಿಲ್ಲ. ಇನ್ನು ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ಪೇಜ್ ಡಿಸ್ ಪ್ಲೇ ಆಗುತ್ತಿರಲಿಲ್ಲ. ಇದರಿಂದಾಗಿ ಬಳಕೆದಾರರು ಆತಂಕಕ್ಕೊಳಗಾದರು. ಆದರೆ ಇದು ತಾಂತ್ರಿಕ ದೋಷದಿಂದ ಉಂಟಾದ ಸಮಸ್ಯೆ ಎಂದು ಫೇಸ್ ಬುಕ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಅಲ್ಲದೆ, ಯಾವುದೇ ಸೈಬರ್ ದಾಳಿಯಾದ ಸಾಧ್ಯತೆಯಿಲ್ಲ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ