ಫೇಸ್ ಬುಕ್ ಸ್ನೇಹಿತನ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಶಾಕ್ ಆದ ಯುವತಿ. ಕಾರಣವೇನು ಗೊತ್ತಾ?
ಶುಕ್ರವಾರ, 15 ಮಾರ್ಚ್ 2019 (07:00 IST)
ಲಂಡನ್ : ಯುವತಿಯೊಬ್ಬಳಿಗೆ ಫೇಸ್ ಬುಕ್ ನಲ್ಲಿ ಪರಿಚಯನಾದ ಹುಡುಗಿಯೊಬ್ಬಳು ಹುಡುಗನ ವೇಷ ಧರಿಸಿ ಆಕೆಯ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ.
ಹೌದು. ಆರೋಪಿ ಹುಡುಗಿ ಫೇಸ್ಬುಕ್ ನಲ್ಲಿ ಹುಡುಗನ ಹೆಸರಿನಲ್ಲಿ ಖಾತೆ ತೆರೆದಿದ್ದಳು. ಆಗ ಯುವತಿಯೊಬ್ಬಳು ಆಕೆಯ ಜೊತೆ ಸ್ನೇಹ ಬೆಳೆಸಿದ್ದಾಳೆ. ಇವರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಶಾರೀರಿಕ ಸಂಬಂಧ ಬೆಳೆಸುವ ನಿರ್ಧಾರ ಕೈಗೊಂಡಿದ್ದರು. ಸುಮಾರು 10 ಬಾರಿ ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಬೆಳೆಸಿದ್ದಾರೆ.
ಆರೋಪಿ ಹುಡುಗಿ ಸೆಕ್ಸ್ ಟಾಯ್ಸ್ ಬಳಸಿ ಯುವತಿಗೆ ಅನುಮಾನ ಬರದಂತೆ ಸಂಬಂಧ ಬೆಳೆಸುತ್ತಿದ್ದಾಳಂತೆ. ಆದರೆ ಒಮ್ಮೆ ಯುವತಿಗೆ ಈ ವಿಚಾರ ತಿಳಿದು ಆಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ. ಕೋರ್ಟ್ ಆಕೆಗೆ 8 ವರ್ಷಗಳ ಶಿಕ್ಷೆ ವಿಧಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.