ಸೊಸೆಯ ಮೇಲೆ ಮಾನಭಂಗ ಎಸಗಿದ ಮಾವ; ವಿರೋಧಿಸಿದ ಮಗನಿಗೆ ಆಗಿದ್ದೇನು?
ಮಹಿಳೆಯ ಪತಿ ಮತ್ತು ಮನೆಯವರು ಸಂಬಂಧಿಕರ ಮದುವೆಗೆ ತೆರಳಿದಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸೊಸೆಯ ಮೇಲೆ ಮಾವ ಮಾನಭಂಗ ಎಸಗಿದ್ದಾನೆ. ಈ ವಿಚಾರ ಆಕೆ ತನ್ನ ಪತಿಗೆ ತಿಳಿಸಿದಾಗ ಆತ ತನ್ನ ತಂದೆಯ ವಿರುದ್ಧ ವಾದಕ್ಕಿಳಿದಿದ್ದಾನೆ. ಆ ವೇಳೆ ಆರೋಪಿಯ ಕಿರಿಯ ಮಗ ತನ್ನ ತಂದೆಗೆ ಬೆಂಬಲ ನೀಡಿದ್ದಾನೆ. ಮೂವರ ನಡುವೆ ಮಾತಿನ ಚಕಮಕಿ ನಡೆದು ತಂದೆ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಮಗನಿಗೆ ಶೂಟ್ ಮಾಡಿದ್ದಾನೆ.
ಈ ಘಟನೆಯಲ್ಲಿ ಮಗ ಸಾವನಪ್ಪಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯ ಮತ್ತು ಆತನ ಕಿರಿಯ ಮಗನನ್ನು ಬಂಧಿಸಿದ್ದಾರೆ.