ಆರ್ಥಿಕ ಬಿಕ್ಕಟ್ಟು : ಅಧಿಕ ತೆರಿಗೆ, ದರ ಹೆಚ್ಚಳ !

ಶುಕ್ರವಾರ, 4 ನವೆಂಬರ್ 2022 (07:36 IST)
ಕೊಲಂಬೋ : ತೀವ್ರ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸದ್ಯಕ್ಕೆ ಪರಿಸ್ಥಿತಿಗಳು ಸರಿ ಹೋಗುವ ಲಕ್ಷಣಗಳು ಕಾಣುತ್ತಿಲ್ಲ.
 
ಇತ್ತೀಚಿಗೆ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರದ ವಿರುದ್ಧವೂ ಪ್ರಜೆಗಳು ಇದೀಗ ಆಕ್ರೋಶಗೊಂಡಿದ್ದಾರೆ.

ಅಧಿಕ ತೆರಿಗೆ, ಹಣದುಬ್ಬರ, ದರ ಹೆಚ್ಚಳದ ವಿರುದ್ಧ ಜನರು ಮತ್ತೆ ಸಿಡಿದೇಳುತ್ತಿದ್ದಾರೆ. ಕೊಲಂಬೋದಲ್ಲಿ ಬುಧವಾರ ಸಾವಿರಾರು ಜನರು ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾನಿಲ್ ಗೋ ಹೋಂ ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ