ಅದೃಷ್ಟ ಬರುತ್ತದೆ ಎಂದು ವಿಮಾನದ ಎಂಜಿನ್‌ ಗೆ ಕಾಯಿನ್‌ ಹಾಕಿದ ಮೂರ್ಖ. ಆಮೇಲೆ ಆಗಿದ್ದೇನು?

ಶುಕ್ರವಾರ, 1 ಮಾರ್ಚ್ 2019 (07:04 IST)
ಚೀನಾ : ಅದೃಷ್ಟ ಒದಗಿ ಬರುತ್ತದೆ ಎಂದು ಚೀನಾ ವ್ಯಕ್ತಿಯೊಬ್ಬ ವಿಮಾನದ ಎಂಜಿನ್‌ ಗೆ ಕಾಯಿನ್‌ ಹಾಕಿ ದುರಾದೃಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾನೆ.


ಚೀನಾದ ಆಂಕ್ವಿಗ್‌ ಟಿಯಾಝೂಶಾನ್‌ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಅದೃಷ್ಟ ಒದಗಿ ಬರುತ್ತದೆ ಎಂದು ನಾಣ್ಯಗಳು ವಿಮಾನದ ಎಂಜಿನ್‌ ಒಳಗೆ ತೂರುಕಿದ್ದಾನೆ. ಈ ಕಾಯಿನ್‌ ಎಡಬದಿಯ ಎಂಜಿನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ  ವಿಮಾನ ಹಾರಾಟ ರದ್ದುಗೊಂಡಿದ್ದು, ಪ್ರಯಾಣಿಕರ ಟಿಕೇಟ್ ಕೂಡಾ ರದ್ದಾಗಿದೆ. ಈ ಘಟನೆಯಿಂದ ಚೀನಾ ವಿಮಾನಯಾನ ಸಂಸ್ಥೆಗೆ ಸುಮಾರು 20 ಸಾವಿರ ಡಾಲರ್‌ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿದೆ.


ಆದಕಾರಣ ಈ ಘಟನೆಗೆ ಸಂಬಂಧಿಸಿದಂತೆ ಚೀನಾ ವಿಮಾನಯಾನ ಸಂಸ್ಥೆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ