ವಿಮಾನದ ಭಾರ ಕಡಿಮೆ ಮಾಡಲು ಭಾರತೀಯ ವಾಯುಪಡೆ ಇಂಧನ ಟ್ಯಾಂಕ್ ಗಳನ್ನು ಸುರಿದಿತ್ತಷ್ಟೇ ಎಂದ ಪಾಕ್ ಸಚಿವ!

ಬುಧವಾರ, 27 ಫೆಬ್ರವರಿ 2019 (09:07 IST)
ಇಸ್ಲಾಮಾಬಾದ್: ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ್ನು ಪಾಕಿಸ್ತಾನ ಯಾವ ರೀತಿಯೆಲ್ಲಾ ಅಲ್ಲಗೆಳೆಯಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಪಾಕ್ ಸಚಿವನ ಈ ಹೇಳಿಕೆಯೇ ಸಾಕ್ಷಿ.


ಪಾಕಿಸ್ತಾನ ಸರ್ಕಾರದ ಸಚಿವರಾಗಿರುವ ಅಲಿ ಹೈದರ್ ಝೈದಿ ಭಾರತೀಯ ವಾಯು ಸೇನೆ ತನ್ನ ವಿಮಾನದ ಭಾರ ಇಳಿಸಲು ಇಂಧನ ಟ್ಯಾಂಕ್ ಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುರಿದಿತ್ತು. ಇದು ಬಾಂಬ್ ದಾಳಿಯಾಗಿರಲಿಲ್ಲ ಎಂದು ತಮಾಷೆಯಾಗಿ ಟ್ವೀಟ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ.

‘ಮೊದಲನೆಯದಾಗಿ ಪಾಕಿಸ್ತಾನದಲ್ಲಿ ಉಗ್ರರ ಕ್ಯಾಂಪ್ ಇದೆ ಎಂಬುದು ಮೋದಿ ಸರ್ಕಾರದ ಕಲ್ಪನೆಯಷ್ಟೇ. ಎರಡನೆಯದಾಗಿ, ಭಾರತೀಯ ವಾಯುಪಡೆ ಸುರಿದಿದ್ದು ಬಾಂಬ್ ಅಲ್ಲ, ಇಂಧನ ಟ್ಯಾಂಕ್ ಗಳನ್ನು. ಯಾಕೆಂದರೆ ಅವರಿಗೆ ವಿಮಾನದ ಭಾರವನ್ನು ಕೊಂಚ ಕಡಿಮೆ ಮಾಡಬೇಕಿತ್ತು ಅಷ್ಟೇ. ಇನ್ನೇನು ಪಾಕಿಸ್ತಾನ ವಾಯು ಸೇನೆ ತಿರುಗೇಟು ಕೊಡುತ್ತದೆಂದಾಗ ಅವರು ಓಡಿ ಹೋದರು’ ಎಂದು ಝೈದಿ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಹಲವು ಭಾರತೀಯರೂ ಕಾಮೆಂಟ್ ಮಾಡಿದ್ದು, ಹಾಗಿದ್ದರೆ ವಾಯು ಸೇನೆ ಸುರಿದ ಇಂಧನ ಟ್ಯಾಂಕ್ ಗಳನ್ನು ಹೊರಜಗತ್ತಿಗೆ ಪ್ರದರ್ಶನ ಮಾಡಿ ಎಂದು ಕಾಲೆಳೆದಿದ್ದಾರೆ. ಅಂತೂ ಪಾಕ್ ಸಚಿವನ ಖಾತೆಯಿಂದ ಬಂದ ಈ ಟ್ವೀಟ್ ತಮಾಷೆಯಾಗಿತ್ತಾದರೂ, ಪಾಕ್ ನರಿಬುದ್ಧಿಗೆ ಏನನ್ನಬೇಕು ನೀವೇ ಹೇಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ