ಪಾಕಿಸ್ತಾನ : ನನ್ನ ಆಡಳಿತದ ಅವಧಿಯಲ್ಲಿ ಭಾರತದ ಮೇಲೆ ದಾಳಿ ಮಾಡಲು ಪಾಕ್ ಗುಪ್ತಚರ ಇಲಾಖೆ ಜೈಷೆ ಎ ಮೊಹಮ್ಮದ್ ಉಗ್ರ ಸಂಘಟನೆಯ ಸಹಾಯ ಪಡೆದುಕೊಳ್ಳುತ್ತಿತ್ತು ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಪತ್ರಕರ್ತನೋರ್ವ ದೂರವಾಣಿ ಕರೆ ಮೂಲಕ ನಡೆಸಿದ ಸಂದರ್ಶನದನದ ವೇಳೆ ಮುಷರಫ್ ಅವರು, ‘’ಜೆಇಎಮ್ ಒಂದು ಉಗ್ರ ಸಂಘಟನೆ. ನನ್ನ ಆಡಳಿತದ ಅವಧಿಯಲ್ಲಿ ದೇಶದ ಗುಪ್ತಚರ ಇಲಾಖೆ ಭಾರತದ ಮೇಲೆ ದಾಳಿಗಳನ್ನು ನಡೆಸಲು ಈ ಸಂಘಟನೆಯ ಸಹಾಯ ಪಡೆದುಕೊಳ್ಳುತ್ತಿತ್ತು. ಈಗ ಜೆಇಎಮ್ ವಿರುದ್ಧ ತೆಗೆದುಕೊಂಡ ಕ್ರಮಗಳು ನಿಜಕ್ಕೂ ಸ್ವಾಗತಾರ್ಹ," ಎಂದು ಹೇಳಿದ್ದಾರೆ.
‘’2003ರ ಡಿಸೆಂಬರ್ನಲ್ಲಿ ನನ್ನನ್ನು ಹತ್ಯೆ ಮಾಡಲು ಈ ಸಂಘಟನೆ ಪ್ರಯತ್ನಿಸಿತ್ತು. .ನನ್ನ ಅವಧಿಯಲ್ಲಿ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಅಂದಿನ ಪರಿಸ್ಥಿತಿ ಬೆರೆಯೇ ಇತ್ತು. ಭಾರತ-ಪಾಕಿಸ್ತಾನ ಒಬ್ಬರ ಮೇಲೋಬ್ಬರು ರಹಸ್ಯವಾಗಿ ದಾಳಿ ನಡೆಸುತ್ತಿದ್ದರು. ದೇಶದ ಗುಪ್ತಚರ ಇಲಾಖೆ ಇದರಲ್ಲಿ ಪಾಲ್ಗೊಳ್ಳುತ್ತಿತ್ತು," ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.