ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

ಬುಧವಾರ, 9 ಮಾರ್ಚ್ 2022 (17:31 IST)
ಮಾಸ್ಕೋ : ಯುದ್ಧದ ಭೀಕರತೆಗೆ ತತ್ತರಿಸಿರುವ ಉಕ್ರೇನ್, ರಷ್ಯಾದ ಎರಡು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದೆ.

ಉಕ್ರೇನ್ ಸರ್ಕಾರವನ್ನು ಉರುಳಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ರಷ್ಯಾ ತನ್ನ ದಾಳಿ ಕುರಿತು ಸ್ಪಷ್ಟನೆ ನೀಡಿದೆ.

ಈ ಕುರಿತು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾರಿಯಾ ಜಖರೋವಾ, ಉಕ್ರೇನ್ನಲ್ಲಿ ಜೈವಿಕ ಶಸ್ತ್ರಾಸ್ತ್ರಗಳನ್ನು ಯುಎಸ್ನಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದಕ್ಕೆ ಮಾಸ್ಕೋ ದಾಖಲೆಗಳ ಪುರಾವೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. 

ನಾವು ಶಾಂತಿ, ವೈಜ್ಞಾನಿಕ ಗುರಿಗಳ ಬಗ್ಗೆ ಮಾತನಾಡುತ್ತಿಲ್ಲ. ನೀವು ಅಲ್ಲಿ ಏನು ಮಾಡುತ್ತಿದ್ದೀರಿ? ಶಸ್ತ್ರಾಸ್ತ್ರಗಳ ಅಭಿವೃದ್ಧಿಗಾಗಿ ಯುಎಸ್ ರಕ್ಷಣಾ ಇಲಾಖೆಯಿಂದ ಹಣಕಾಸು ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ