ಭಾರೀ ಭೂಕಂಪ : ಭೂಮಿಯೇ ಹೋಳಾಗೋ ಭೀತಿಯಲ್ಲಿದ್ದಾರೆ ಜನ

ಬುಧವಾರ, 22 ಫೆಬ್ರವರಿ 2023 (12:02 IST)
ಅಂಕಾರ : 2 ವಾರಗಳ ಹಿಂದೆ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿರುವ ಭೀಕರ ಭೂಕಂಪದಿಂದಾಗಿ ಎರಡೂ ದೇಶಗಳು ತತ್ತರಿಸಿ ಹೋಗಿದೆ. 2 ವಾರಗಳಿಂದ 47 ಸಾವಿರ ಜನರು ಬಲಿಯಾಗಿದ್ದಾರೆ.

ಸಾವು ನೋವುಗಳ ಭೀಕರತೆಯನ್ನು ಅರಗಿಸಿಕೊಳ್ಳುವುದಕ್ಕೂ ಮೊದಲೇ ಟರ್ಕಿ ಹಾಗೂ ಸಿರಿಯಾದಲ್ಲಿ ಮತ್ತೆ ಸೋಮವಾರ ಭಾರೀ ಭೂಕಂಪವಾಗಿದೆ.

ಸಂಭವಿಸಿದ ಭೂಕಂಪ ಟರ್ಕಿಯ ಹಟಾಯ್ ಪ್ರದೇಶದ ಡೆಫ್ನೆ ಪಟ್ಟಣದಲ್ಲಿ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಅದರ ಕೇಂದ್ರ ಬಿಂದುವನ್ನು ಪತ್ತೆಹಚ್ಚಲಾಗಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ದಾಖಲಾಗಿದ್ದು, ಘಟನೆಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ.
200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೋರ್ಡಾನ್, ಸೈಪ್ರಸ್, ಇಸ್ರೇಲ್ ಹಾಗೂ ಈಜಿಪ್ಟ್ನಲ್ಲೂ ಕಂಪನದ ಅನುಭವವಾಗಿರುವುದಾಗಿ ವರದಿಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ