ಟರ್ಕಿ ಬೆನ್ನಲ್ಲೇ ಭಾರತದಲ್ಲೂ ಹೆಚ್ಚುತ್ತಿದೆ ಭೂಕಂಪನ!

ಶುಕ್ರವಾರ, 17 ಫೆಬ್ರವರಿ 2023 (08:18 IST)
ಶ್ರೀನಗರ : ಟರ್ಕಿ ಮತ್ತು ಸಿರಿಯಾದಲ್ಲಿ ಭಾರೀ ಭೂಕಂಪ ಸಂಭವಿಸಿದ ಬೆನ್ನಲ್ಲೇ ಇದೀಗ ಭಾರತದಲ್ಲೂ ಅಲ್ಲಲ್ಲಿ ಭೂಕಂಪನ ವರದಿಯಾಗುತ್ತಿದೆ.

ಶುಕ್ರವಾರ (ಫೆ.17) ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ 3.6 ತೀವ್ರತೆಯ ಭೂಕಂಪನ ಸಂಭವಿಸಿದೆ.

ಮುಂಜಾನೆ 5:10ರ ವೇಳೆಗೆ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. 

ಸಾಮಾನ್ಯ ಭೂಕಂಪನ ಉಂಟಾಗಿರುವುದರಿಂದ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಸಂಭವಿಸಿಲ್ಲ. ಭೂಕಂಪನದ ಕೇಂದ್ರ ಬಿಂದು ಕತ್ರಾದಿಂದ ಪೂರ್ವಕ್ಕೆ 97 ಕಿಮೀ ದೂರದಲ್ಲಿ ಕಂಡುಬಂದಿದೆ. ಭೂಕಂಪದ ಅಕ್ಷಾಂಶ ಮತ್ತು ರೇಖಾಂಶಗಳು ಕ್ರಮವಾಗಿ 33.10 ಡಿಗ್ರಿ ಮತ್ತು 75.97 ಡಿಗ್ರಿಯಲ್ಲಿ ಕಂಡುಬಂದಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ