ಭೂಕಂಪ : ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ!

ಬುಧವಾರ, 15 ಫೆಬ್ರವರಿ 2023 (10:46 IST)
ಅಂಕಾರ : ಫೆಬ್ರವರಿ 6 ರಂದು ಸಂಭವಿಸಿದ ಮಾರಣಾಂತಿಕ ಭೂಕಂಪದಿಂದಾಗಿ ಟರ್ಕಿ ಹಾಗೂ ಸಿರಿಯಾ ದೇಶಗಳು ಅಕ್ಷರಶಃ ನಲುಗಿ ಹೋಗಿದೆ.

ಇದೀಗ ಸಾವಿನ ಸಂಖ್ಯೆ 41,000 ತಲುಪಿದೆ. ಅವಶೇಷಗಳಡಿಯಿಂದ ಬದುಕುಳಿದವರ ಚೀರಾಟ ಇನ್ನೂ ಕೂಡಾ ಕೇಳಿಬರುತ್ತಿದೆ. ಬದುಕುಳಿದವರನ್ನು ರಕ್ಷಿಸಲು ರಕ್ಷಣಾ ತಂಡಗಳು ಕಳೆದೊಂದು ವಾರದಿಂದ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿವೆ.

ಮಂಗಳವಾರ ಟರ್ಕಿಯಲ್ಲಿ ಅವಶೇಷಗಳಡಿಯಿಂದ 9 ಜನ ಬದುಕುಳಿದವರನ್ನು ರಕ್ಷಿಸಲಾಗಿದೆ. ನಿರಾಶ್ರಿತರು ಈಗ ಕೊರೆಯುವ ಚಳಿಯಲ್ಲಿ ಹಾಗೂ ಆಹಾರದ ಕೊರತೆಯಿಂದಾಗಿ ಹೆಣಗಾಡುತ್ತಿದ್ದಾರೆ. ನಗರವಿಡೀ ಸತ್ತ ಜನರ ವಾಸನೆ ಬರುತ್ತಿದೆ. ಅವಶೇಷಗಳಡಿ ಇನ್ನೂ ಹಲವರು ಜೀವಂತವಾಗಿರುವ ಸಾಧ್ಯತೆಯಿದ್ದು, ಎಲ್ಲರನ್ನೂ ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ