ಅಥೆನ್ಸ್ : ಒಬ್ಬ ವ್ಯಕ್ತಿ ಭೂಮಿಯ ಮೇಲೆ ಇಷ್ಟು ಕಾಲ ಬದುಕಬೇಕು ಎಂದು ದೇವರು ನಿರ್ಧರಿಸಿದ ಮೇಲೆ ಆತ ಯಾವುದೇ ಅಪಾಯದ ಸಂದರ್ಭದಲ್ಲಿಯೂ ಪಾರಾಗುತ್ತಾನೆ ಎಂಬುದಕ್ಕೆ ಈ ಘಟನೆಯೇ ಮುಖ್ಯ ಉದಾಹರಣೆ.
ಯುರೋಪ್ ರಾಷ್ಟದಲ್ಲಿ ನಡೆಯಬೇಕಿದ್ದ ಸಭೆಗೆ ಗ್ರೀಕ್ ರಾಷ್ಟ್ರದ ಅಂಟೋನಿಯಸ್ ಮಾರ್ವಪೋಲ್ಸ್ ಎಂಬಾತ ನೈರೋಬಿಯಾದಿಂದ ಇಟಿ-302 ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಆತ 2 ನಿಮಿಷ ತಡವಾಗಿ ಬಂದಿದ್ದಕ್ಕೆ ಆತನು ಜೀವಂತವಾಗಿ ಉಳಿದುಕೊಂಡಿದ್ದಾನೆ.
ಹೌದು. ಆತ ಪ್ರಯಾಣಿಸಿದ ಬೇಕಿದ್ದ ವಿಮಾನ ಸ್ವಲ್ಪ ಹೊತ್ತಿನಲ್ಲೇ ಪತನವಾಗಿತ್ತು. ಇದರಿಂದ 157 ಜನ ಸಾವು ಕಂಡಿದ್ದರು. ಆದರೆ ಅಂಟನಿಸ್ ಮಾರ್ವಪೋಲ್ ತಡವಾಗಿ ಬಂದ ಕಾರಣ ಸಾವಿನ ದವಡೆಯಿಂದ ಪಾರಾಗಿದ್ದರು. ಇದನ್ನ ಮಾರ್ವಪೋಲ್ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.