ಜಿಂಕೆಯೂ ಪ್ರತೀಕಾರ ತೀರಿಸಿಕೊಳ್ಳುತ್ತಾ ?(ವಿಡಿಯೋ)

ಮಂಗಳವಾರ, 4 ಅಕ್ಟೋಬರ್ 2016 (13:42 IST)
ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುತ್ತಾರೆ. ತನಗೆ ನೋವುಂಟು ಮಾಡಿದವರ ಮೇಲೆ ಹಾವು ಸೇಡನ್ನು ತೀರಿಸಿ ಕೊಳ್ಳದೇ ಬಿಡದಂತೆ. ಇತರ ಪ್ರಾಣಿಗಳು ಸೇಡು ತೀರಿಸಿಕೊಂಡ ಉದಾಹರಣೆಗಳು ನಮಗೆ ಸಿಗುತ್ತವೆ. ಆದರೆ ಜಿಂಕೆಯಂತಹ ಸಾಧು ಪ್ರಾಣಿ ಸೇಡನ್ನು ತೀರಿಸಿಕೊಂಡಿದ್ದು ನೀವೆಂದು ಕೇಳಿರಲಿಕ್ಕಿಲ್ಲ.
ಆದರೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಜಿಂಕೆಯಂತಹ ಪಾಪದ ಪ್ರಾಣಿಯ ರೋಷವನ್ನು ಎತ್ತಿ ತೋರಿಸಿದೆ. ಅಸಹಾಯಕ ಸ್ಥಿತಿಯಲ್ಲಿಯೂ ಅದು ತನಗೆ ನೋವುಂಟು ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದೆ. 
 
ಬರೊಬ್ಬರಿ ಎರಡು ವಾರಗಳ ಹಿಂದೆ ಅಮೇರಿಕದ ನ್ಯೂಜೆರ್ಸಿಯಯಲ್ಲಿ ನಡೆದ ಘಟನೆ ಇದು.43 ವರ್ಷದ ಎಲೆನ್ ಎಂಬಾಕೆ ರಾತ್ರಿ ಸಮಯದಲ್ಲಿ ಕಾರ್ ಚಲಾಯಿಸುವಾಗ ರಸ್ತೆಗಡ್ಡ ಬಂದ ಜಿಂಕೆಗೆ ಗಂಭೀರ ಗಾಯಗಳಾಗಿದ್ದವು. ಕಾರ್ ಬಡಿದು ಸ್ವಲ್ಪ ಸಮಯ ದೂರ ಹೋಗಿ ಬಿದ್ದ ಜಿಂಕೆ ಸಹಿಸಲಾಗದ ನೋವಲ್ಲೂ ಅಲ್ಲಿಂದ ಎದ್ದು ಬಂದು ಕಾರ್ ಚಾಲಕಿ ಹೆಲೆನ್ ಮೇಲೆ ಎರಗಿದೆ. ಆದರೆ ಜಿಂಕೆಯನ್ನು ತಳ್ಳಿ ಹೆಲೆನ್ ಡೋರ್ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
 
ಘಟನೆಯಲ್ಲಿ ಎಲೆನ್‌ಗೆ ಸಣ್ಣಪುಟ್ಟ ಗಾಯಯಗಳಾಗಿವೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆ ದುರ್ಮರವನ್ನಪ್ಪಿದೆ.
 
ಜಿಂಕೆಯೂ ಪ್ರತೀಕಾರ ತೀರಿಸಿಕೊಳ್ಳುತ್ತಾ ?(ವಿಡಿಯೋ)
 

ವೆಬ್ದುನಿಯಾವನ್ನು ಓದಿ