ಸತ್ತವರಿಗಾಗಿ ಹೋಟೆಲ್ ಓಪನ್ ಮಾಡಿದ ವ್ಯಕ್ತಿ. ಕಾರಣವೇನು ಗೊತ್ತಾ?
ಸೋಮವಾರ, 18 ಮಾರ್ಚ್ 2019 (10:02 IST)
ಜಪಾನ್ : ಹೊಸದಾಗಿ ಮದುವೆಯಾದ ದಂಪತಿಗಳಿಗಾಗಿ, ಪ್ರಯಾಣಿಕರಿಗಾಗಿ ತ್ರೀ ಸ್ಟಾರ್, ಫೈವ್ ಸ್ಟಾರ್, ಐಶಾರಾಮಿ ಹೋಟೆಲ್ ಗಳನ್ನು ಕಟ್ಟುತ್ತಾರೆ. ಆದರೆ ಜಪಾನಿನಲ್ಲಿ ಸತ್ತವರಿಗಾಗಿ ಹೋಟೆಲ್ ಗಳನ್ನು ನಿರ್ಮಿಸಿದ್ದಾರಂತೆ.
ಹೌದು. ಇಲ್ಲಿನ ಸ್ಮಶಾನವು ತುಂಬಾ ರಷ್ ಇರುತ್ತದೆ. ಅಂತ್ಯಕ್ರಿಯೆಗೆ ನಾಲ್ಕರಿಂದ ಐದು ದಿನ ಕಾಯಬೇಕಾಗುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡ ವ್ಯಕ್ತಿಯೊಬ್ಬ ಮೃತರನ್ನು ಮಾತ್ರ ಇರಿಸಿಕೊಳ್ಳುವ ಹೋಟೆಲ್ ನ್ನು ತೆರದಿದ್ದಾನೆ. ಈ ಹೊಟೇಲ್ ಶವಪೆಟ್ಟಿಗೆಯಲ್ಲಿ ಶವವನ್ನು ಹಾಳಾಗದಂತೆ ಸಂರಕ್ಷಿಸಲು ಒಂದು ದಿನಕ್ಕೆ 12000 ಯೆನ್ ನೀಡಬೇಕಾಗುತ್ತದೆ.
ಈ ಹೋಟೆಲ್ ಮಾಲೀಕನ ಹೆಸರು ಹಿಸೊಶಿ ಟೆರಾಮುರಾ. ಸಮಾಧಿಗಳು ಮತ್ತು ಶವಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದ ಈತ ಕಳೆದ ವರ್ಷ ನೂಡಲ್ ಅಂಗಡಿಯೊಂದರ ಮುಂದೆ ಈ ಹೋಟೆಲ್ ತೆರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.