ಜತೆಯಾಗಿ ಜಪಾನ್ ಗೆ ತೆರಳಿದ ಪ್ರಭಾಸ್-ಅನುಷ್ಕಾ ಜೋಡಿ! ಅಭಿಮಾನಿಗಳಲ್ಲಿ ಕುತೂಹಲ!

ಮಂಗಳವಾರ, 26 ಫೆಬ್ರವರಿ 2019 (10:06 IST)
ಹೈದರಾಬಾದ್: ಬಾಹುಬಲಿ ಜೋಡಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪರಸ್ಪರ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ ಎಂದರೂ ಅವರ ಅಭಿಮಾನಿಗಳು ಇಬ್ಬರೂ ಮದುವೆಯಾಗಲಿ ಎಂದೇ ಬಯಸುತ್ತಾರೆ.


ಈಗ ಈ ಜೋಡಿ ಜಪಾನ್ ಗೆ ಜತೆಯಾಗಿ ತೆರಳಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ ಅನುಷ್ಕಾ ಮತ್ತು ಪ್ರಭಾಸ್ ಈಗ ಜಪಾನ್ ಗೆ ಹೋಗಿರುವುದು ಸಿನಿಮಾ ವಿಚಾರಕ್ಕೆ.

ಪ್ರಭಾಸ್ ಅಭಿನಯದ ಮಿರ್ಚಿ ಮತ್ತು ಡಾರ್ಲಿಂಗ್ ಸಿನಿಮಾ ಜಪಾನ್ ನಲ್ಲಿ ಮಾರ್ಚ್ 2 ರಂದು ತೆರೆ ಕಾಣುತ್ತಿದೆ. ಮಿರ್ಚಿಯಲ್ಲಿ ಪ್ರಭಾಸ್ ಗೆ ಅನುಷ್ಕಾ ನಾಯಕಿಯಾಗಿದ್ದರೆ, ಡಾರ್ಲಿಂಗ್ ನಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿದ್ದರು. ಇದೀಗ ಈ ಚಿತ್ರದ ಸ್ಕ್ರೀನಿಂಗ್ ಸಂದರ್ಭದಲ್ಲಿ ಜಪಾನ್ ಪ್ರೇಕ್ಷಕರ ಜತೆ ಸಂವಾದ ನಡೆಸಲು ಇಬ್ಬರೂ ಆ ದೇಶಕ್ಕೆ ತೆರಳಿದ್ದಾರೆ ಅಷ್ಟೇ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ